ಕುಡುಕರ ಹಾವಳಿ ತಪ್ಪಿಸುವಂತೆ ಸಿ.ಎಂ.ಗೆ ಪತ್ರ

02-dsbr-hdl--02
ಹೂವಿನಹಡಗಲಿಯ ಮೆಹಬೂಬ್ ನಗರ ನಿವಾಸಿಗಳು ಸಿಎಂಗೆ ಬರೆದ ಪತ್ರ.
Published on

ಹೂವಿನಹಡಗಲಿ: ಸಂಜೆ ವೇಳೆ ಪಟ್ಟಣದ ಸುತ್ತಮುತ್ತಲಿನ ನಿವೇಶನ, ಉಳುಮೆ ಭೂಮಿಗಳಲ್ಲಿ ಗುಂಪಾಗಿ ಮದ್ಯಸೇವನೆ ಮಾಡುತ್ತಿದ್ದಾರೆ. ಈ ಕುರಿತು ಸ್ಥಳೀಯ ಅಧಿಕಾರಿಗಳು ಮೌನವಾಗಿದ್ದು, ಮಾನ್ಯ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಪಟ್ಟಣದ ನಿವಾಸಗಳು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಪಟ್ಟಣದಲ್ಲಿನ ಬಹುತೇಕ ಡಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಕೃಷಿ ಭೂಮಿಗಳಲ್ಲಿ ಪ್ಲಾಸ್ಟಿಕ್, ಕಾಲಿ ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ. ಅಭಕಾರಿ ಇಲಾಖೆ ಮತ್ತು ಸ್ಥಳಿಯ ಆಡಳಿತ ಜಾಣ ಮೌನವಹಿಸಿದೆ.

ಸಂಜೆಯಾದರೆ ಮನೆಯಿಂದ ಮಹಿಳೆಯರು ಮತ್ತು ವೃದ್ಧರು ಹೊರ ಹೋಗಲು ಎದುರುತ್ತಿದ್ದಾರೆ. ಬಾಲಭವನ ರಸ್ತೆ, ಹರಪನಹಳ್ಳಿ ರಸ್ತೆ, ರಿಂಗ್‌ರೋಡ್‌ನಲ್ಲಿನ ಕೃಷಿ ಜಮೀನುಗಳಲ್ಲಿ ಕುಡುಕರು ರಾಜಾರೋಷವಾಗಿ ಕುಡಿದು ಬಾಟಲಿಗಳನ್ನು ಹೊಡೆದು ತೆರಳುತ್ತಿದ್ದಾರೆ.

ಎಂದು ಪಟ್ಟಣ ಮುಲ್ಲಾಸಾಬ್ ಪ್ಲಾಟ್‌ನ ಮೆಹಬೂಬ್ ನಗರದ ನಿವಾಸಿಗಳಾದ ಬಿ.ನಿಂಗಪ್ಪ, ಮಹಮ್ಮದ್ ಬಾಷಾ, ಚಾಂದ್ ಬಾಷಾ, ಶಬ್ಬೀರ್, ವಿಶ್ವನಾಥ, ಗಿರಿರಾಜ ಇತರರು ಪತ್ರ ಬರೆದಿದ್ದಾರೆ.

ಈ ಕುರಿತು ಹಡಗಲಿಯಲ್ಲಿ ಮಿತಿಮೀರಿದ ಕುಡುಕರ ಹಾವಳಿ ಎಂಬ ತಲೆಬರಹದಲ್ಲಿ ವಿಜಯವಾಣಿ ಪತ್ರಿಕೆಯು ಸುದ್ದಿ ಪ್ರಕಟಿಸಿತ್ತು. ಸುದ್ದಿ ಪ್ರಕಟವಾಗಿ ಮೂರುದಿನಗಳವರೆಗೆ ಪೊಲೀಸ್ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ನೆಪಮಾತ್ರಕ್ಕೆ ಗಸ್ತು ತಿರುಗಿದ್ದು. ನಂತರ ಯಾರು ಬರಲಿಲ್ಲ ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನಹರಿಸಿ ಪರಿಹಾರ ಕಲ್ಪಿಸುವಂತಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net