ಕುಡುಕನನ್ನು ಕೂಡಿ ಹಾಕಿದ ವಿದ್ಯಾಥರ್ಿಗಳು

Published on

ಯಾದಗಿರಿ: ಪಾನಮತ್ತನಾದ ಕೆಲ ಕಿಡಿಗೇಡಿ ಅನಗತ್ಯವಾಗಿ ವಿದ್ಯಾಥರ್ಿ ಹಾಗೂ ಶಿಕ್ಷಕರ ಮೇಲೆ ಹಲ್ಲೆಗೆ ಮುಂದಾದ ಘಟನೆ ಶುಕ್ರವಾರ ವಡಗೇರಾ ತಾಲೂಕಿನ ಕ್ಯಾತನಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಕರ್ಾರಿ ಪ್ರಾಥಮಿಕ ಶಾಲೆ ಎದುರು ಕೆಲ ದಿನಗಳಿಂದ ಕುಡುಕರ ಹಾವಳಿ ಹೆಚ್ಚಾಗುತ್ತಿದೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ. ಶುಕ್ರವಾರ ಕುಡುಕನೊಬ್ಬ ಶಾಲೆ ಎದುರು ಬಂದು ಗಾಜಿನ ಬಾಟಲ್ ಶಿಕ್ಷಕಿ ಮೇಲೆ ಎಸೆದಿದ್ದಾನೆ. ಕೂಡಲೇ ವಿದ್ಯಾಥರ್ಿಗಳು ಸೇರಿ ಆತನನ್ನು ಕೋಣೆಯೊಳಗೆ ಕೂಡಿಹಾಕಿ, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ವಡಗೇರಾ ಪೊಲೀಸರು ಭೀಮಯ್ಯ ಎಂಬಾತನನ್ನು ವಶಕ್ಕೆ ಪಡೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದೆ ಈ ರೀತಿ ಘಟನೆ ನಡೆಯದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ವಹಿಸುವಂತೆ ಪಾಲಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net