ಕುಡಿವ ನೀರು ಸರಬರಾಜು ಗ್ರಾಮ ಘೋಷಿಸಿ

ctd zp.....
Published on

ಚಿತ್ರದುರ್ಗ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಗ್ರಾಮವನ್ನಾದರೂ 24/7 ನಿರಂತರ ಕುಡಿವ ನೀರು ಪೂರೈಕೆ ಗ್ರಾಮವೆಂದು ಘೋಷಿಸುವೊದರೊಂದಿಗೆ ಮಾದರಿ ಗ್ರಾಮಗಳ ರಚನೆಗೆ ಶ್ರಮಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಹೇಳಿದರು.

ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಯೋಜನೆ , ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿವ ನೀರು ಸರಬರಾಜು ಯೋಜನೆ ಕುರಿತು ಹಿರಿಯೂರು, ಹೊಸದುರ್ಗ ತಾಲೂಕುಗಳ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗಣಕಯಂತ್ರ ನಿರ್ವಾಹಕರು, ಗ್ರಾಮೀಣ ಕುಡಿವ ನೀರು, ನೈರ್ಮಲ್ಯ ಇಲಾಖೆ ಇಂಜಿನಿಯರ್‌ಗಳಿಗೆ ಜಿಪಂ ನಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾ ಗಾರದಲ್ಲಿ ಮಾತನಾಡಿದರು.

ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿವ ನೀರು ಸರಬರಾಜು ಯೋಜನೆಯಡಿ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಪಂ ವ್ಯಾಪ್ತಿಯ ವೀರವ್ವ ನಾಗತಿಹಳ್ಳಿ, ದೇವಿಗೆರೆ ಗ್ರಾಪಂ ವ್ಯಾಪ್ತಿ ಯ ಬೀಚನಹಳ್ಳಿ ಲಂಬಾಣಿಹಟ್ಟಿ ಗ್ರಾಮಗಳನ್ನು 24/7 ನಿರಂತರ ಕುಡಿವ ನೀರು ಸರಬರಾಜು ಗ್ರಾಮಗಳೆಂದು ಈಗಾಗಲೇ ಘೋಷಿಸಲಾಗಿದೆ. ಉಳಿದ ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ಘೋಷಿಸಬೇಕು ಎಂದರು.

ಗ್ರಾಪಂಗಳಲ್ಲಿ ನೀರಿನ ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿ ಅಳವಡಿಸಿಕೊಂಡು ನೀರಿನ ಕಂದಾಯವನ್ನು ವಿಡಬ್ಲ್ಯೂಎಸ್‌ಸಿ ಖಾತೆಗೆ ಜಮೆ ಮಾಡಬೇಕು.ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯನ್ನು ಪ್ರತಿ ಎರಡು ತಿಂಗಳಿಗೊಮ್ಮೆ ನಡೆಸಲು ತಿಳಿಸಿದರು.

ಜಲ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡ ನಂತರ ಪಿಡಿಒ ಗ್ರಾಮಕ್ಕೆ ಭೇಟಿ ನೀಡಿ ಮನೆಗಳ ನಳ ಸಂಪರ್ಕ ಪರಿಶೀಲಿಸಿದ ನಂತರ ಗ್ರಾಪಂಗೆ ಹಸ್ತಾಂತರಿಸ ಬೇಕು ಎಂದರು.

ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಉಪ ವಿಭಾಗದ ಹಿರಿಯೂರು ಮತ್ತು ಹೊಸದುರ್ಗ ತಾಲೂಕುಗಳ ಎಇಇಗಳಾದ ಪ್ರಸನ್ನಕುಮಾರ್, ಹಸನ್‌ಪಾಷಾ, ಜಲ ಜೀವನ್ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ ಎಸ್.ನಾಡರ್, ಜಿಲ್ಲಾ ಐಇಸಿ ಸಮಾಲೋಚಕ ಬಿ.ಸಿ.ನಾಗರಾಜು, ಕೆಎಸ್‌ಆರ್‌ಡಬ್ಲ್ಯೂಎಸ್‌ಪಿ ಸಮಾಲೋಚಕ ಕಿರಣ್ ಪಾಟೀಲ್, ಚಂದ್ರಕಾಂತ್,ಪ್ರವೀಣ್, ಯಲ್ಲಪ್ಪ, ಗೀತಾ, ಲಕ್ಷ್ಮೀ, ಸ್ವಚ್ಛ ಭಾರತ್ ಮಿಷನ್(ಗ್ರಾ)ಯೋಜನೆ ಜಿಲ್ಲಾ ಸಮಾಲೋಚಕ ಡಿ.ಆರ್.ವಿನಯ್ ಕುಮಾರ್,ಪ್ರಮೀಳಾ, ಎಚ್.ಆರ್.ಶಶಿಧರ್, ನಾಗರಾಜ್, ಪ್ರತಾಪ್ ಇತರರಿದ್ದರು.

ಜಿಪಂ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ (ಗ್ರಾಮ್ಸ್)ಸಹಯೋಗದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net