

ಚಿತ್ರದುರ್ಗ: ಜಿಲ್ಲೆಯ ಬರಪೀಡಿತ ತಾಲೂಕುಗಳಲ್ಲಿ 2023-24ನೇ ಸಾಲಿನ 3.3 ಕೋಟಿ ರೂ.ವೆಚ್ಚದ ತುರ್ತು ಕುಡಿಯುವ ನೀರು ಕಾಮಗಾರಿಗ ಳ ಕ್ರಿಯಾ ಯೋಜನೆಗೆ ಘಟನೋತ್ತರ ಅನುಮತಿ ನೀಡಲಾಯಿತು.
ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಸಿಇಒ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ಈ ನಿರ್ಧಾರ ಕೈಗೊಂಡಿತು.
ಕಾಮಗಾರಿಗಳ ಅನುಷ್ಠಾನಕ್ಕೆ ಮೊದಲ ಹಂತದಲ್ಲಿ ಜಿಲ್ಲೆಗೆ 1.5 ಕೋಟಿ ರೂ.2ನೇ ಹಂತದಲ್ಲಿ 3.64 ಕೋಟಿ ರೂ.ಅನುದಾನ ಬಿಡು ಗ ಡೆ ಆಗಿತ್ತು. ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳ ಕೋರಿಕೆ ಮೇರೆಗೆ ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು ಹಾಗೂ ಹೊಸದುರ್ಗ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 60.70 ಲಕ್ಷ ರೂ.ವೆಚ್ಚದೊಂದಿಗೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಸಭೆಯಲ್ಲಿ ಘಟ ನೋತ್ತರ ಅನುಮೋದನೆ ದೊರಕಿತು.
ಕಳೆದ ಮೇ29 ರಂದು ಜರುಗಿದ್ದ ಸಭೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ರಾಂಪುರ ಹಾಗೂ ಇತರೆ ಗ್ರಾಮಗಳಿಗೆ ನೀರು ಸರಬರಾಜು ಮಾಡುವ 60.70 ಲಕ್ಷ ರೂ. ವೆಚ್ಚದ ಹೊಸ ಪೈಪ್ ಲೈನ್ ಅಳವಡಿಕೆಗೆ ಅನುಮತಿ ನೀ ಡಲಾಗಿತ್ತು.
ಜಲಜೀವನ್ ಮಿಷನ್ ಅಡಿ ಜಿಲ್ಲೆಯ 6 ತಾಲೂಕುಗಳಲ್ಲಿ 4 ಬ್ಯಾಚ್‌ಗಳಲ್ಲಿ 1568 ಕಾರ್ರ‌್ಯಾತ್ಮಕ ನಳ ನೀರು ಸಂಪರ್ಕ ಕಲ್ಪಿಸುವ ಕಾ ಮಗಾರಿ ಕೈಗೊಳ್ಳಲಾಗಿದೆ. ಈ ಪೈಕಿ ಅನುಷ್ಠಾನವಾಗಿರುವ ಹಾಗೂ ಅನುಷ್ಠಾನಗೊಳ್ಳುತ್ತಿರುವ 1189 ಕಾಮಗಾರಿಗಳಿಗೆ ನಾಮಫಲಕ ಅಳ ವಡಿಸಿಲು 4.61 ಕೋಟಿ ರೂ.ವೆಚ್ಚದ ಕ್ರಿಯಾ ಯೋಜನೆ ಅನುಮೋದನೆಗಾಗಿ ಇಲಾಖಾ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಇಲಾಖೆ ಇಇ ಬಸವನ ಗೌಡ ತಿಳಿಸಿದರು.
ಪ್ರಸ್ತುತ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳಲ್ಲಿ ನಾಮಫಲಕ ಅಳವಡಿಸುವ ವೆಚ್ಚವನ್ನು ಜೋಡಿಸಿ ಕಾಮಾಗಾರಿ ಪೂರ್ಣಗೊಳಿ ಸಿ,ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳ ನಾಮಫಲಕ ಅಳವಡಿಸಲು ಮಾತ್ರ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸಿಇಒ ಸೂಚಿ ಸಿದರು. ಜಿ.ಪಂ.ಉಪಕಾರ‌್ಯದರ್ಶಿ ಕೆ.ತಿಮ್ಮಪ್ಪ, ಸಿಎಒ ಡಿ.ಆರ್.ಮಧು,ಡಿಸಿಎಫ್ ಟಿ.ರಾಜಣ್ಣ,ಪಂ.ರಾಜ್ ಇಂಜಿನಿಯರಿಂಗ್ ವಿಭಾಗದ ಇಇ ಹನುಮಂತಪ್ಪ ಮತ್ತಿತರರು ಇದ್ದರು. (ಸಿಟಿಡಿ 13 ಝೆಡ್‌ಪಿ ಸಿಇಒ)
ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಸಭೆ ಕುಡಿವ ನೀರಿನ ಕಾಮಗಾರಿ ಕುರಿತ ಸಭೆಯಲ್ಲಿ ಜಿಪಂ ಸಿಇಒ ಎಸ್.ಜೆ. ಸೋಮ ಶೇಖರ್, ಡಿಎಸ್ ಕೆ.ತಿಮ್ಮಪ್ಪ, ಸಿಎಒ ಡಿ.ಆರ್.ಮಧು,ಡಿಸಿಎಫ್ ಟಿ.ರಾಜಣ್ಣ,ಇಇಗಳಾದ ಬಸವನಗೌಡ,ಹನುಮಂತಪ್ಪ ಇದ್ದರು.