ಕುಡಿವ ನೀರಿನ ಬವಣೆ ನೀಗಿಸಿ

0908wdgr01
ವಡಗೇರಾ ಹೊರವಲಯದ ಕೊಳವೆಬಾವಿಯಿಂದ ಕುಡಿವ ನೀರು ತುಂಬಿಕೊಳ್ಳುತ್ತಿರುವ ಜನರು.
Published on

ವಡಗೇರಾ: ಪಟ್ಟಣದಲ್ಲಿ ಕುಡಿವ ನೀರಿನ ಅಭಾವ ಹೆಚ್ಚಾಗಿದ್ದು, ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಸಮಸ್ಯೆಗೆ ಸ್ಪಂದಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಲ್ಯಾಣ ಕರ್ನಾಟಕ ಸಂಚಾಲಕ ಶರಣು ಇಟಗಿ ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಕೆಲ ಬಡಾವಣೆಗಳಲ್ಲಿ ನೀರು ಸರಬರಾಜು ಆಗುತ್ತಿಲ್ಲ. ಕೊಡ ನೀರಿಗೂ ಜನರು ಪರಿತಪಿಸುತ್ತಿದ್ದಾರೆ. ಮಹಿಳೆಯರು ಅಧಿಕಾರಿಗಳಿಗೆ ನಿತ್ಯಹಿಡಿ ಶಾಪ ಹಾಕುತ್ತಿದ್ದಾರೆ. ಕೆಲ ಕೊಳವೆಬಾವಿಗಳು ಕೆಟ್ಟು ನಿಂತಿವೆ. ಇನ್ನೂ ಕೆಲ ಕಡೆ ಕೊಳವೆಬಾವಿ ಇದ್ದರೂ ಬಳಕೆಗೆ ಯೋಗ್ಯವಿಲ್ಲ. ಒಂದು ಕಿಮೀ ದೂರವಿರುವ ಹೊರವಲಯದ ಕೊಳವೆಬಾವಿಯಿಂದ ನೀರು ತರುವ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣಕ್ಕೆ ತುಮಕೂರು ಗ್ರಾಮದ ಕೃಷ್ಣಾ ನದಿಯಿಂದ ನೀರು ಹರಿಸಿದಾಗ ಮಾತ್ರ ಈ ಸಮಸ್ಯೆ ತಪ್ಪಲಿದೆ. ಹೀಗಾಗಿ ಶಾಸಕರು ಮತ್ತು ಅಧಿಕಾರಿಗಳು ಈ ಸಮಸ್ಯೆಯತ್ತ ಚಿತ್ತ ಹರಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದ ನೀರಿನ ಸಮಸ್ಯೆ ಬಗೆಹರಿಸಲು ವಿಳಂಬವಾದಲ್ಲಿ ಸಾರ್ಜನಿಕರ ಜತೆ ತಾಲೂಕು ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net