ಕುಡಿವ ನೀರಿಗಾಗಿ ರು.೧.೫ ಕೋಟಿ ಬಿಡುಗಡೆ

ydg01
Published on

ಗುರುಮಠಕಲ್: ಮತಕ್ಷೇತ್ರದ ಅನೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಕೆಕೆಆರ್‌ಡಿಬಿಯಿಂದ ೧.೫ ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ತಾಲೂಕಿನ ಜಿ.ಬಿ.ತಾಂಡಾದಲ್ಲಿ ೨೦೨೩-೨೪ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ (ನಾನ್ ಸೋಶಿಯಲ್) ಅನುದಾನದಡಿ ವಿವಿಧ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಜಿ.ಬಿ.ತಾಂಡಾದಲ್ಲಿ ಆರ್‌ಒ ಪ್ಲಾಂಟ್ ಉದ್ಘಾಟನೆಯಾಗಿದ್ದು, ಶೀಘ್ರ ಕಾಮಗಾರಿ ಮುಗಿಸಿ ಜನರ ಬಳಕೆಗೆ ಕೊಡುವಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು. ಕಲ್ಯಾಣ ಕರ್ನಾಟಕದ ಶಾಸಕರ ಅನುದಾನದಲ್ಲಿ ವಾರಣಾಸಿ ಭಂಗೀಮಠದ ಜಿರ್ಣೋದ್ಧಾರಕ್ಕೆ ೧೫ ಲಕ್ಷ ರೂ. ಅನುದಾನ, ಹಳ್ಳಿತಾಂಡಾಕ್ಕೆ ೧೦ ಲಕ್ಷ ರೂ ಅನುದಾನ ಹಾಗೂ ಆಶಾಪುರ ತಾಂಡಾ ಸಿಸಿ ರಸ್ತೆಗೆ ೧೦ ಲಕ್ಷ ರೂ. ಅನುದಾನ ನೀಡಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಹಂತ-ಹAತವಾಗಿ ಅನುದಾನ ತರುವ ಮೂಲಕ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀಧರ ಪ್ರಾಸ್ತಾವಿಕ ಮಾತನಾಡಿದರು. ಕರ‍್ಯಕ್ರಮಕ್ಕೂ ಮುನ್ನ ಶಾಸಕ ಶರಣಗೌಡ ಕಂದಕೂರ ಅವರನ್ನು ಯಲ್ಹೇರಿಯಿಂದ ಯುವಕರು ಬೈಕ್ ರ‍್ಯಾಲಿ ಮೂಲಕ ಅವರನ್ನು ಅದ್ದೂರಿಯಾಗಿ ವೇದಿಕೆಗೆ ಕರೆತಂದರು.
ನಿರ್ಮಿತಿ ಕೇಂದ್ರ ಯೋಜನಾಧಿಕಾರಿ ಕಿರಣಕುಮಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜಪ್ಪ ಐರೆಡ್ಡಿ, ತಾಪಂ ಅಧಿಕಾರಿ ಅಂಬರೀಶ ಪಾಟೀಲ್, ವಿಶೇಷ ತಹಸೀಲ್ದಾರ್ ಗುಂಡಪ್ಪ, ಪಿಡಿಒ ಶೋಭಾ ಪಾಟೀಲ್, ಜೆಡಿಸ್ ಮುಖಂಡ ಅಜಯ ರೆಡ್ಡಿ ಯಲ್ಹೇರಿ, ತಾಪಂ ಮಾಜಿ ಅಧ್ಯಕ್ಷ ಈಶ್ವರ ರಾಠೋಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net