ಕುಡಿವ ನೀರಿಗಾಗಿ ಪ್ರತಿಭಟನೆ,ಮತದಾನ ಬಹಿಷ್ಕಾರದ ಎಚ್ಚರಿಕೆ

ctd---0002
Published on

ಚಿತ್ರದುರ್ಗ: ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ಹೊಳಲ್ಕೆರೆ ತಾಲೂಕು ಟಿ.ನುಲೇನೂರು ಗ್ರಾಮಸ್ಥರು ಬುಧವಾರ ಗ್ರಾಪಂ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಕಳೆದ ಹತ್ತು ದಿನಗಳಿಂದಲೂ ಕುಡಿವ ನೀರಿನ ಸಮಸ್ಯೆಯನ್ನು ಗ್ರಾಮಸ್ಥರು ಎದುರಿಸುತ್ತಿದ್ದು, ಅಧಿಕಾರಿಗಳ ಗಮನಕ್ಕೆ ತ ದರು ಪ್ರಯೋಜನವಾಗಿಲ್ಲವೆಂದು ಖಾಲಿ ಕೊಡಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಸೂಕ್ತ ರೀತಿಯಲ್ಲಿ ನೀರು ಪೂರೈಸದಿದ್ದರೆ ಲೋ ಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದರು. ಮೊದಲು ನೀರು ಕೊಡಿ ನಂತರ ಮತ ಕೇಳಲು ಬನ್ನಿ ಎಂದು ಪ್ರತಿಭಟನಾ ನಿರತರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net