ಕುಡಿಯುವ ನೀರು ಪೂರೈಸುವಂತೆ ಆಗ್ರಹ

22Kush05
ಹಳಗೋಟೆ ಗ್ರಾಮದ ಮಡಿವಾಳ ಬೀದಿಯ ನಿವಾಸಿಗಳು ಗ್ರಾಪಂ ಕಚೇರಿ ಮುಂದೆ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು. ರತ್ನಾ, ಜವರಮ್ಮ, ಲಲಿತಾ, ಭಾಗ್ಯಾ, ಮಂಚಮ್ಮ, ಲೀಲಾವತಿ, ನಂದಿನಿ ಇದ್ದರು.
Published on

ಕುಶಾಲನಗರ: ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಗೋಟೆ ಗ್ರಾಮದ ಮಡಿವಾಳ ಬೀದಿಯ ನಿವಾಸಿಗಳು ಹೆಬ್ಬಾಲೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಕಚೇರಿ ಮುಂಭಾಗ ಖಾಲಿ ಕೊಡ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. 3 ತಿಂಗಳಿನಿಂದ ಕುಡಿಯುವ ನೀರಿಲ್ಲದೆ ಹಲವು ಬಾರಿ ಈ ಸಂಬಂಧ ಬೇಡಿಕೆ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹೆಬ್ಬಾಲೆ ಗ್ರಾಮ ಪಂಚಾಯಿತಿಯಲ್ಲಿ ಕಾಯಂ ಪಿಡಿಒ ಇಲ್ಲದಿರುವುದು ಮತ್ತು ಈಗಿರುವ ಪಿಡಿಒ ಗೊಳ್ಳಪ್ಪ ವಾರದಲ್ಲಿ ಕನಿಷ್ಠ 3 ದಿನ ಹೆಬ್ಬಾಲೆಯಲ್ಲಿ ಕರ್ತವ್ಯ ನಿರ್ವಹಿಸದ ಕಾರಣ ಹಲವು ತೊಂದರೆಗಳಿಗೆ ಕಾರಣವಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಅರುಣಕುಮಾರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸ್ಥಳೀಯರಾದ ರತ್ನಾ, ಜವರಮ್ಮ, ಲಲಿತಾ, ಭಾಗ್ಯ, ಮಂಚಮ್ಮ, ಲೀಲಾವತಿ, ನಂದಿನಿ ಇತರರಿದ್ದರು.

ತಹಸೀಲ್ದಾರ್ ಭೇಟಿ: ಮಡಿವಾಳ ಬೀದಿಗೆ ಕುಶಾಲನಗರ ತಹಸೀಲ್ದಾರ್‌ ಕಿರಣ್ ಗೋರಯ್ಯ ಅವರು ಸೋಮವಾರ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದರು. ಸದ್ಯಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲಾಗುವುದು. ಒಂದೆರಡು ದಿನಗಳಲ್ಲಿ ಮೋಟಾರ್ ದುರಸ್ತಿ ಮಾಡಿ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net