

ಬೆಳಗಾವಿ: ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂನಿಂದ ಬೆಳಗಾವಿ ಮಹಾನಗರಕ್ಕೆ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನ ಪೈಪಲೈನ್ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆ ಫೆ.17 ಮತ್ತು 18 ರಂದು ಎರಡು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಹಿಡಕಲ್ ಕಚ್ಚಾ ನೀರು ಸರಬರಾಜಿನ ಎಂಎಸ್ ಮತ್ತು ಹಳೇ ಪಿಎಸ್‌ಸಿ ಸಿಮೆಂಟ್ ಕೊಳವೆ ಮುಖ್ಯ ಮಾರ್ಗದ ವಿವಿಧ ಸ್ಥಳಗಳಲ್ಲಿ ಘಣನೀಯ ಪ್ರಮಾಣದಲ್ಲಿ ನೀರು ಸೂರಿಕೆಯಾಗುತ್ತಿದೆ. ಕುಂದರಗಿ ಪಂಪ್ ಹೌಸ್ ಹತ್ತಿರ, ಅರಣ್ಯ ಇಲಾಖೆ ಚೆಕ್‌ಪೋಸ್ಟ್ ಹತ್ತಿರ ಸೇರಿದಂತೆ ಮೂರು ಸ್ಥಳಗಳಲ್ಲಿ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಮಹಾನಗರದ ಮಜಗಾಂವ್, ನಾನಾವಾಡಿ, ಚಿದಂಬರ ನಗರ, ಶಹಾಪುರ, ವಡಗಾಂವ, ಹಳೇ ಬೆಳಗಾವಿ, ಸಹ್ಯಾದ್ರಿ ನಗರ, ಕುವೆಂಪು ನಗರ, ಟಿವಿ ಕೇಂದ್ರ, ಸದಾಶಿವ ನಗರ, ಕಲ್ಮೇಶ್ವರ ನಗರ, ಸುಭಾಷ ನಗರ, ಅಶೋಕ ನಗರ, ಹೊಸ ಗಾಂಧಿ ನಗರ, ಕಣಬರ್ಗಿ, ಕುಡಚಿ, ದಂಡುಮಂಡಳಿ ಪ್ರದೇಶ, ಕೆಎಐಡಿಬಿ ಕೈಗಾರಿಕೆ ಪ್ರದೇಶ, ಸೈನಿಕ ನಗರ, ಬಿಮ್ಸ್ ಆಸ್ಪತ್ರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (ಕೆಯುಐಡಿಎಫ್‌ಸಿ) ವ್ಯವಸ್ಥಾಪಕರು ತಿಳಿಸಿದ್ದಾರೆ.