ಕುಡಿಯುವ ನೀರಿನ ಪೈಪ್‌ಲೈನ್ ಸೋರಿಕೆ

17. HBH. 2.,.,
Published on

ಹಗರಿಬೊಮ್ಮನಹಳ್ಳಿ: ವಲ್ಲಭಾಪುರ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಪೈಪ್‌ಲೈನ್ ಸೋರಿಕೆಯಾಗಿ, ನೀರು ಕಲುಷಿತಗೊಂಡು ಜನರಿಗೆ ಪೂರೈಕೆಯಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು, ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಬಿ.ಮುತ್ಕೂರು ರಸ್ತೆ ಹಾಗೂ ಪರಿಶಿಷ್ಟ ಜಾತಿ ಕಾಲನಿ ಹತ್ತಿರ ಪೈಪ್ ಒಡೆದಿದ್ದು, ನೀರು ಸೋರಿಕೆಯಾಗಿ ಸಂಗ್ರಹವಾಗುತ್ತಿದೆ. ಬಳಿಕ ಇದೇ ನೀರು ಪೈಪ್ ಮೂಲಕ ಜನರಿಗೆ ಪೂರೈಕೆಯಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆಯೂ ಪೈಪ್ ಒಡೆದಿದೆ. ಈ ಬಗ್ಗೆ ಪಿಡಿಒ ಗಮನಕ್ಕೆ ತಂದಾಗ ಪೈಪ್ ಒಡೆದಿರುವ ಸ್ಥಳ ಪರಿಶೀಲನೆಗೆ ಗ್ರಾಪಂ ಕಾರ್ಯದರ್ಶಿ ಕೊಟ್ರೇಶ ಅವರನ್ನು ಕಳಿಸಿದ್ದರು. ಆದರೆ, ಸಮಸ್ಯೆ ಹಾಗೆಯೇ ಇದೆ ಎಂದು ಗ್ರಾಪಂ ಸದಸ್ಯರಾದ ಕೆ.ಎಂ.ಚೈತ್ರಾ ಮಲ್ಲಿಕಾರ್ಜುನ, ಬಿ.ದೊಡ್ಡಹುಲುಗಪ್ಪ, ಡಾಣಿ ರೇಖಾಸುರೇಶ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net