ಕುಡಿಯುವ ನೀರಿನ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

Drinking water should be of good quality
ತಾಳಿಕೋಟೆ ತಾಲೂಕು ಕೊಡಗಾನೂರ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಭೂಮಿಪೂಜಾ ಕಾರ್ಯಕ್ರಮದಲ್ಲಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿದರು. ಮಡುಸಾಹುಕಾರ ಬಿರಾದಾರ, ಅಶೋಕ ಅಸ್ಕಿ, ಸಾಹೇಬಗೌಡ ಬಿರಾದಾರ, ಬಸನಗೌಡ ವಣಕ್ಯಾಳ, ಆನಂದಗೌಡ ಪಾಟೀಲ ಇತರರಿದ್ದರು.
Published on

ತಾಳಿಕೋಟೆ: ಶುದ್ಧ ಕುಡಿಯುವ ನೀರಿನ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ, ರಸ್ತೆಗಳು ಹಾಳಾಗದಂತೆ ಗುತ್ತಿಗೆದಾರರು ಎಚ್ಚರವಹಿಸಿ ಕಾಮಗಾರಿ ನಿರ್ವಹಿಸಬೇಕು ಎಂದು ಶಾಸಕ ರಾಜುಗೌಡ ಪಾಟೀಲ ಹೇಳಿದರು.

ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಜಲಜೀವನ ಮಿಷನ್ ಯೋಜನೆಯ ಮನೆಮನೆಗೆ ನಳ ಸಂಪರ್ಕ ಯೋಜನೆಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಜೆಜೆಎಂ ಜನರಿಗೆ ಉತ್ತಮ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯಾಗಿದೆ. ಈ ಕಾಮಗಾರಿ ಮಾಡುವ ಬರದಲ್ಲಿ ಕೆಲವೆಡೆ ರಸ್ತೆಗಳನ್ನು ಹೆಚ್ಚಿಗೆ ಅಗೆದು ಹಾಳು ಮಾಡಿರುವುದು ಗಮನಕ್ಕೆ ಬಂದಿದೆ. ಕಾಮಗಾರಿಗಾಗಿ ಅಗೆದಿರುವ ರಸ್ತೆಯನ್ನು ಸರಿಪಡಿಸಲು ಸೂಚನೆ ಕೊಟ್ಟಿದ್ದೇನೆ ಎಂದರು.

ಅಧಿಕಾರ ಸಿಕ್ಕಿದೆ ಎಂದು ಬದಲಾಗುವ ವ್ಯಕ್ತಿ ನಾನಲ್ಲ. ಎಲ್ಲ ಕಾರ್ಯಕರ್ತರಿಗೂ ಸಾಮಾಜಿಕ ನ್ಯಾಯದಡಿ ರಾಜಕೀಯ ಅವಕಾಶಗಳನ್ನು ಒದಗಿಸಿಕೊಡುತ್ತೇನೆ. ಬ.ಸಾಲವಾಡಗಿ ಜಿಪಂ ವ್ಯಾಪ್ತಿಯ 4 ಗ್ರಾಪಂಗಳು ಜೆಡಿಎಸ್ ಮಡಿಲಿಗೆ ಬಂದಿವೆ. ಪಕ್ಷ ಸಂಘಟನೆಯ ಜತೆಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.

ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿದರು. ಮುಖಂಡರಾದ ಮಡುಸಾಹುಕಾರ ಬಿರಾದಾರ, ಅಶೋಕ ಅಸ್ಕಿ, ಸಾಹೇಬಗೌಡ ಬಿರಾದಾರ, ಬಸನಗೌಡ ವಣಕ್ಯಾಳ, ಆನಂದಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಈಸುಗೌಡ ನಾಡಗೌಡ, ಶಂಕರಗೌಡ ದೇಸಾಯಿ, ಪಂಚಯ್ಯ ಹಿರೇಮಠ, ವೀರೇಶ ಕಾರಗನೂರ, ಪ್ರಭುಗೌಡ ಹಳ್ಳಿಪಾಟೀಲ, ಡಾ. ಬಲವಂತ್ರಾಯ ನಡಹಳ್ಳಿ, ಬಸವರಾಜ ಗೊರ್ಜಿ, ಆನಂದ ಅಸ್ಕಿ, ಆನಂದಗೌಡ ಪಾಟೀಲ, ಭಾಗಣ್ಣ ಬಿಳೇಭಾವಿ, ಶೇಖು ಧೂಳೇಕರ, ಮುತ್ತು ಧೂಳೇಕರ, ರಾಜು ನಾಯ್ಕೋಡಿ, ಮೋಸಾವಲಿ ಸಾಲವಾಡಗಿ, ಹುಸೇನ ವಕೀಲ ಇತರರಿದ್ದರು.

ದೇವರಹಿಪ್ಪರಗಿ ಮತಕ್ಷೇತ್ರದ ಕೆರೆಗಳನ್ನು ತುಂಬುವ ಕಾರ್ಯಕ್ಕೆ ಮುಂದಾಗಿದ್ದೇನೆ. ಈ ತಿಂಗಳಾಂತ್ಯದಲ್ಲಿ ಎಲ್ಲ ಕೆರೆಗಳು ಭರ್ತಿಯಾಗಲಿವೆ. ಇದರಿಂದ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ತಪ್ಪಲಿದೆ.
ರಾಜುಗೌಡ ಪಾಟೀಲ, ಶಾಸಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net