ಕುಡಿಯುವ ನೀರಿನ ಅರವಟಿಕೆಗೆ ಚಾಲನೆ

Court
Published on

ಕಲಬುರಗಿ:  ರಮೇಶ್ಚಂದ್ರ ಜೈನ್​ ಸ್ಮರಣಾರ್ಥ ನ್ಯಾಯವಾದಿ ನವೀನ್​ ಜೈನ್​ ಅವರು ದಾನ ರೂಪದಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ನೀಡಿರುವ ಒಂದು ಸಾವಿರ ಲೀಟರ್​ ನೀರಿನ ಟ್ಯಾಂಕ್​ ಮತ್ತು ೨೦೦ ಲೀಟರ್​ ಸಾರ‍್ಥ್ಯದ ರೆಫ್ರಿಜೇಟರ್​ಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜಿ.ಎಲ್​.ಲಕ್ಷಿ$್ಮನಾರಾಯಣ ಸೋಮವಾರ ಚಾಲನೆ ನೀಡಿದರು.

ಕರ‍್ಯನಿರತ ನ್ಯಾಯವಾದಿಗಳು, ನ್ಯಾಯಾಲಯಕ್ಕೆ ಬರುವ ಕದಾರರರಿಗೆ ಬೇಸಿಗೆಯಲ್ಲಿ ಕುಡಿಯುವ ನೀರು ದೊರಕಿಸಿಕೊಡಲು ಅರವಟಿಗೆ ದಾನದ ರೂಪದಲ್ಲಿ ನೀಡಿದ್ದಾರೆ. ಸುಸಜ್ಜಿತ ಮನೆ ರೂಪದಲ್ಲಿ ನರ‍್ಮಿಸಿ, ಅದಕ್ಕೆ ೧೦೦೦ ಲೀಟರ್​ ಟ್ಯಾಂಕ್​ ಮತ್ತು ೨೦೦ ಲೀಟರ್​ ಸಾರ‍್ಥ್ಯದ ರೆಫ್ರಿಜಿರೇಟರ್​ ಅಳವಡಿಸಲಾಗಿದೆ.

ನ್ಯಾ.ಲಕ್ಷಿ$್ಮನಾರಾಯಣ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಹೆಚ್ಚಿನ ಸಂಖ್ಯೆಯ ವಕೀಲರು ದಾನದ ರೂಪದಲ್ಲಿ ಸಾಮಾಜಿಕ ಸೇವೆ ಮಾಡಲು ಮುಂದೆ ಬರುತ್ತಿರುವುದು ಸ್ವಾಗತರ‍್ಹ. ಕಲ್ಯಾಣ ರ‍್ನಾಟಕ ಭಾಗ ಜಗತ್ತಿಗೆ ವಚನ ಸಾಹಿತ್ಯ ನೀಡಿದ ಭೂಮಿ ಮತ್ತು ಕಾಯಕ ಹಾಗೂ ದಾಸೋಹ ತತ್ವ ನೀಡಿದ ನೆಲ. ಹೀಗಾಗಿ ಪ್ರತಿಯೊಬ್ಬರಲ್ಲಿ ಸಾಮಾಜಿಕ ನ್ಯಾಯದ ತುಡಿತ ಇದ್ದೇ ಇದೆ ಎಂದರು.

ನ್ಯಾಯವಾದಿ ಗುಪ್ತಲಿಂಗ ಪಾಟೀಲ್​ ಮಾತನಾಡಿ, ಜೈನ್​ ಅವರ ಈ ಸಾಮಾಜಿಕ ಕಳಕಳಿ ಮತ್ತಷ್ಟು ವಕೀಲರಿಗೆ ಪ್ರೇರಣೆ ದೊರೆಯುವಂತಾಗಲಿ ಎಂದು ಆಶಿಸಿದರು.

ಬಸಲಿಂಗ ನಾಸಿ, ಎಸ್​.ಕೆ ಚಿಕ್ಕಳ್ಳಿ, ಶಿವರಾಜ ಪಾಟೀಲ ರಾಜಾಪುರ, ಹಿರಿಯ ವಕೀಲರಾದ ಮಲ್ಲಿಕರ‍್ಜುನ ಕೋಟೆ, ಕರ‍್ಯಕ್ರಮದ ವ್ಯವಸ್ಥಾಪಕ ಅಶೋಕ ಚೌಹಾಣ, ಸಂಚಾಲಕ ಜೇ.ಎಸ್​.ವಿನೋದ ಕುಮಾರ, ಆನಂದ ಸೋನಕಾಂಬಳೆ, ಭೂಪೇಂದ್ರ ಸಿಂಗ್​, ಶೈಲೇಂದ್ರ ಜಮಾದಾರ ಇತರರಿದ್ದರು. ಅಭಿನಂದನ ಜೈನ್​ ಸ್ವಾಗತಿಸಿದರು. ಶ್ರೇಯಾನ್ಸ್​ ಜೈನ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net