ಕುಡಿದ ಮತ್ತಿನಲ್ಲಿ ಸ್ನೇಹಿತನ ಕೊಲೆ

Published on

ತುಮಕೂರು: ತಾಲೂಕಿನ ಮಲ್ಲಸಂದ್ರ ತುಮುಲ್​ ಸಮೀಪ ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಆರಂಭವಾಗಿರುವ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿದೆ. ಬಿಹಾರ ಮೂಲದ ಮದನ್​ ಪಾಸ್ವಾನ್​(33) ಕೊಲೆಯಾದವನು. ತುಮುಲ್​ನಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಗೆ ಕಾರ್ಮಿಕರಾಗಿರುವ ಬಿಹಾರ ಮೂಲದ ಕಾರ್ಮಿಕರು ಭಾನುವಾರ ರಾತ್ರಿ ಕುಡಿತ ಮತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದು, ತಲೆಗೆ ತೀವ್ರ ಪೆಟ್ಟುತಿಂದ ಮದನ್​ ಪಾಸ್ವಾನ್​ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಲಾಟೆಯಲ್ಲಿ ಭಾಗವಹಿಸಿದ್ದ ಆರೋಪಿಗಳು ಪರಾರಿಯಾಗಿದ್ದು,ತುಮಕೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿಗೆ ಸಿಲುಕಿ ಸಾವು

ತುಮಕೂರು: ತುಮಕೂರು& ಮಲ್ಲಸಂದ್ರ ರೈಲು ನಿಲ್ದಾಣಗಳ ನಡುವಿನ ರೈಲು ಹಳಿ ಮೇಲೆ ಸುಮಾರು 55 ವರ್ಷದ ಮಹಿಳೆ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮೃತರು ಕೆಂಪು ಬಣ್ಣದ ಅರ್ಧತೋಲಿನ ಹಸಿರು ಬಾರ್ಡರ್​ ಜಾಕೆಟ್​, ಒಂದು ಗಿಳಿ ಹಸಿರು ಬಣ್ಣದ ಮೇಲೆ ಕೆಂಪು ಹೂವುಗಳಿರುವ ಸೀರೆ ಧರಿಸಿದ್ದಾರೆ. ವಾರಸುದಾರರು ಇದ್ದರೆ ರೈಲ್ವೆ ಪೊಲೀಸ್​ ಕಂಟ್ರೋಲ್​ ರೂಂ.080 22871291, ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್​ ಠಾಣೆ ಮೊ.9480802118, ತುಮಕೂರು ಉಪಠಾಣೆ ಮೊಬೈಲ್​ ನಂ.9480802142 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net