ಕುಡಿತದಿಂದ ಶೋಚನೀಯ ಸ್ಥಿತಿ ನಿರ್ಮಾಣ

BTP09Photo3
ಬೆಟ್ಟದಪುರದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಿ.ಎಸ್.ಪ್ರಭಾಶಂಕರ್, ಬಿ.ಜೆ.ದೇವರಾಜು, ಅಣ್ಣಯ್ಯಶೆಟ್ಟಿ, ಮಂಜುಳಾ, ಸೌಮ್ಯಾ, ರಾಮ್, ಸಂತೋಷ್, ರಾಮಚಂದ್ರ ಇದ್ದರು.
Published on


ರಾವಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಲಕ್ಷ್ಮೀಕಾಂತ್ ಅಭಿಮತ


ಬೆಟ್ಟದಪುರ: ಕುಡಿತಕ್ಕೆ ದಾಸನಾದವನಿಗೆ ಹಾಗೂ ಆತನ ಕುಟುಂಬಕ್ಕೆ ಸಮಾಜ ಗೌರವ ನೀಡುವುದಿಲ್ಲ. ಇದರಿಂದ ಯಾರಿಗೂ ಬೇಡವಾದ ಶೋಚನೀಯ ಜೀವನ ಬಂದೊದಗಲಿದೆ ಎಂದು ರಾವಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಲಕ್ಷ್ಮೀಕಾಂತ್ ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಟ್ಟದಪುರ ಬಿ.ಸಿ.ಟ್ರಸ್ಟ್ ಹಾಗೂ ಕೊಡಗಿನ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಡಿತಕ್ಕೊಳಗಾದ ಒಬ್ಬ ವ್ಯಕ್ತಿಯಿಂದ ಇಡೀ ಕುಟುಂಬವೇ ನರಕ ಅನುಭವಿಸುವ ಸ್ಥಿತಿ ಬರಲಿದೆ ಎಂದರು.


ಬ್ರಾಹ್ಮಣ ಸಂಘದ ಅಧ್ಯಕ್ಷ ಬಿ.ಎಸ್.ಪ್ರಭಾಶಂಕರ್ ಮಾತನಾಡಿ, ಏಕತೆಯಿಂದ ಇರಲು ಮೊದಲು ಮದ್ಯಪಾನ ಸೇರಿದಂತೆ ದುಶ್ಚಟಗಳು ದೂರವಾಸಸಸಗಬೇಕು ಎಂದರು.


ಬೆಟ್ಟದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಚಂದ್ರು, ಉಪಾಧ್ಯಕ್ಷೆ ಸೌಮ್ಯಾ ಸಂತೋಷ್, ಜಗಜಾಗೃತಿ ವೇದಿಕೆ ಉಪಾಧ್ಯಕ್ಷ ಬಿ.ಜೆ.ದೇವರಾಜು, ಹಿರಿಯ ಮುಖಂಡ ಅಣ್ಣಯ್ಯಶೆಟ್ಟಿ, ಉದ್ಯಮಿ ಗಗನ್, ಜನಜಾಗೃತಿ ಸದಸ್ಯ ರಾಮಚಂದ್ರ, ಎಎಸ್‌ಐ ಮನೋಹರ್, ವೈದ್ಯಾಧಿಕಾರಿ ಡಾ.ರಾಮ್, ಮುಖಂಡರಾದ ಆರ್.ಲೋಕೇಶ್, ಪಟೇಲ್ ನಟೇಶ್, ಯೋಜನಾಧಿಕಾರಿ ಸಂತೋಷ್ ಕುಮಾರ್, ಜಿವಿಕೆ ಮಮತಾ, ವಿಎಲ್‌ಇ ಜಿ.ಎನ್.ಸಿಂಚನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net