ಕುಡಗೋಲು ರೋಗಕ್ಕೆ ಚಿಕಿತ್ಸೆ ಪಡೆಯಿರಿ

sri test
ಶೃಂಗೇರಿ ತಾಲೂಕಿನ ಕೆರೆಮನೆಯಲ್ಲಿ ಆರೋಗ್ಯ ತಪಾಸಣೆ ಮಾಡಲಾಯಿತು. ರಮ್ಯಾ, ಶಾಂತಮ್ಮ, ಸೀತು ಇದ್ದರು.
Published on

ಶೃಂಗೇರಿ: ಬುಡಕಟ್ಟು ಜನಾಂಗದಲ್ಲಿ ಕಂಡುಬರುವ ಕುಡಗೋಲು ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವುದರಿಂದ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ಮೆಣಸೆ ಆರೋಗ್ಯ ಕೇಂದ್ರದ ರಮ್ಯಾ ಹೇಳಿದರು.

ಮೆಣಸೆ ಗ್ರಾಮ ಪಂಚಾಯಿತಿ ಕೆರೆಮನೆಯಲ್ಲಿ ಆರೋಗ್ಯ ಇಲಾಖೆಯಿಂದ ಪರಿಶಿಷ್ಟ ಪಂಗಡದ ಜನರಿಗೆ ಸೋಮವಾರ ಏರ್ಪಡಿಸಿದ್ದ ಕುಡಗೋಲು ರೋಗದ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುಡ್ಡದಿಂದ ಬರುವ ಸೆಲೆಯುಳ್ಳ ನೀರನ್ನು ಕುಡಿಯುವ ಜನರಿಗೆ ಬರುವ ಈ ಕಾಯಿಲೆಯು ಆರಂಭದಲ್ಲಿ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ರಕ್ತಹೀನತೆಯಿಂದ ನಿಶ್ಯಕ್ತಿ ಉಂಟಾಗುತ್ತದೆ. ರೋಗದಿಂದ ದೇಹದಲ್ಲಿ ರಕ್ತ ಸಂಚಾರ ಕಡಿಮೆಯಾಗುತ್ತದೆ. ರಕ್ತಹೀನತೆಯಿಂದ ಸಾವು ಸಂಭವಿಸಬಹುದಾದ ಸಾಧ್ಯತೆ ಇರುತ್ತದೆ. ಸರ್ಕಾರ ಎಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯಿಂದ 40 ವರ್ಷದೊಳಗಿನ ವ್ಯಕ್ತಿಗಳ ರಕ್ತ ತಪಾಸಣೆ ಮಾಡಲಾಗುತ್ತಿದೆ ಎಂದರು.

ಆಶಾ ಕಾರ್ಯಕರ್ತೆ ಸುರೇಖಾ ಮಾತನಾಡಿ, ಯಾವುದೇ ಕಾಯಿಲೆಯನ್ನು ಹಗುರವಾಗಿ ಪರಿಗಣಿಸದೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ಪಡೆಯಬೇಕು. ಹಳ್ಳಿಯಲ್ಲಿ ಆರೋಗ್ಯ ಇಲಾಖೆಯಿಂದ ರಕ್ತ ತಪಾಸಣೆ ನಡೆಸಲಾಗುತ್ತಿದೆ ಎಂದರು. ಕರ್ನಾಟಕ ಆದಿವಾಸಿ ಬುಡಕಟ್ಟು ಸಂಘದ ಪದಾಧಿಕಾರಿಗಳಾದ ಆನಂದ, ಭೋಜ, ಶಾಂತಾ, ಸೀತು, ಶಾಂತಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net