

ಗೋಣಿಕೊಪ್ಪ: ಕುಟ್ಟಂದಿ ಕೆ.ಬಿ.ಪ್ರೌಢಶಾಲೆಯಲ್ಲಿ ಶುಕ್ರವಾರ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಗ್ರಾಮಸ್ಥರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಭಾರದ ಗುಂಡು ಎಸೆತ, ವಿವಿಧ ಓಟದ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನ ನೀಡಲಾಯಿತು. ಕಾಫಿ ಬೆಳೆಗಾರ ಸುಳ್ಳಿಮಾಡ ಕಾವೇರಪ್ಪ ಅವರು ಶಾಲೆಗೆ ಮುಖ್ಯದ್ವಾರ, ಕಮಾನು ನಿರ್ಮಿಸಿಕೊಡುವ ಭರವಸೆ ನೀಡಿದರು.
ಉದ್ಯಮಿ ನಾಮೇರ ನವೀನ್ ಶಾಲೆಯ ಅಭಿವೃದ್ಧಿಗೆ 1 ಲಕ್ಷ ರೂ. ಹಣ ನೀಡುವುದಾಗಿ ಘೋಷಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕಂಜಿತಂಡ ಕೆ.ಮಂದಣ್ಣ, ಉಪಾಧ್ಯಕ್ಷ ಕೊಲ್ಲೀರ ಯು. ಬೋಪಣ್ಣ, ಖಜಾಂಚಿ ಉಮೇಶ್ ಕೇಚಮಯ್ಯ, ಮುಖ್ಯ ಶಿಕ್ಷಕಿ ಕೆ. ಎ. ದ್ವೀಪ ಇದ್ದರು.