

ಹಳ್ಳೂರ: ಸಾಮಾಜಿಕ, ಆರ್ಥಿಕವಾಗಿ ನಿರ್ಲಕ್ಷಕ್ಕೆ ಒಳಗಾಗಿರುವ ಮಾಳಿ, ಮಾಲಗಾರ ಸಮುದಾಯಕ್ಕೆ ರಾಜ್ಯ ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಸ್ವಾಗತಾರ್ಹ, ಜತೆಗೆ ಇನ್ನಿತರ ಸಮುದಾಯಗಳನ್ನು ಸೇರ್ಪಡೆಗೆ ಆಕ್ಷೇಪವಿದೆ ಎಂದು ಮುಖಂಡ ಮುರಿಗೆಪ್ಪ ಮಾಲಗಾರ ಹೇಳಿದರು. ಸ್ಥಳೀಯ ಲಕ್ಷ್ಮೀ ನಗರದಲ್ಲಿ ಸಾವಿತ್ರಿ ಬಾಯಿ ಪುಲೆ ಮಹಿಳಾ ಮಂಡಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿ, ಹೆಣ್ಣು ಜಗದ ಕಣ್ಣು. ಕುಟುಂಬದಲ್ಲಿ ಮಹಿಳೆಯ ಪಾತ್ರ ಮುಖ್ಯವಾದುದು ಎಂದರು. ಸಂತೋಷಿ ಶೇಡಬಾಳೆ ಹಾಗೂ ರೇಖಾ ಗೊಸಬಾಳ ಮಾತನಾಡಿ, ಮಹಿಳೆಯರು ಉನ್ನತ ಶಿಕ್ಷಣ ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.
ಸಾವಿತ್ರಿ ಬಾಯಿ ಪುಲೆ ಅವರ ಭಾವಚಿತ್ರಕ್ಕೆ ಸಾವಿತ್ರಿ ಬಾಯಿ ಪುಲೆ ಮಹಿಳಾ ಮಂಡಳ ಅಧ್ಯಕ್ಷ ಬಂದವ್ವ ಕಾಗೆ ಪೂಜೆ ಸಲ್ಲಿಸಿದ್ದರು. ಉಪಾಧ್ಯಕ್ಷೆ ಕಸ್ತೂರಿ ನಿಡೋಣಿ, ಕಾರ್ಯದರ್ಶಿ ಶೃತಿ ಕೂಲಿಗೋಡ, ಗ್ರಾಪಂ ಸದಸ್ಯ ಮಹಾದೇವ ಹೊಸಟ್ಟಿ, ಶಾಂತವ್ವ ಲಕ್ಷ್ಮೇಶ್ವರ, ಸುವರ್ಣ ಕುಂದರಗಿ, ಭಾರತಿ ನಿಡೋಣಿ, ಮಾನಂದಾ ಅಥಣಿ, ನೀಲವ್ವ ಕುಂದರಗಿ, ಸಾಂವಕ್ಕ ಕೂಲಿಗೋಡ, ಸುನೀತಾ ಹೊಸಟ್ಟಿ ಇತರರಿದ್ದರು.