ಕುಟುಂಬಗಳು ಬೀದಿ ಪಾಲಾಗುವ ಪರಿಸ್ಥಿತಿ

11srt-2
Published on

ಶಿರಹಟ್ಟಿ: ಲಾಕ್​ಡೌನ್​ನಿಂದ ಕಷ್ಟದಲ್ಲಿರುವ ವೃತ್ತಿಪರ ಛಾಯಾಗ್ರಾಹಕರಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ತಾಲೂಕು ವೃತ್ತಿಪರ ಛಾಯಾಗ್ರಾಹಕರ ಸಂಘದಿಂದ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಮೂಲಕ ಸೋಮವಾರ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾ ಸಂಚಾಲಕ ಸುನೀಲ ಪವಾರ ಮಾತನಾಡಿ, ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್​ಡೌನ್ ಘೊಷಿಸಿದ್ದರಿಂದ ಎರಡು ತಿಂಗಳಿಂದ ಜೀವನಾಧಾರವಾಗಿರುವ ಸ್ಟುಡಿಯೋಗಳಿಗೆ ಬೀಗ ಜಡಿಯಲಾಗಿದೆ. ಅದರಿಂದಾಗಿ ಜೀವನ ನಡೆಸುವುದು ಕಷ್ಟವಾಗಿದೆ. ಏತನ್ಮಧ್ಯೆ ಪರಸ್ಪರ ಅಂತರ ಕಾಯ್ದುಕೊಳ್ಳಲು, ಜನಸಂದಣಿ ಆಗದಂತೆ ಎಚ್ಚರಿಕೆ ವಹಿಸಲು ಮದುವೆಗಳನ್ನು ಸರಳವಾಗಿ ಆಚರಿಸುವಂತೆ ಸರ್ಕಾರ ಕಟ್ಟಪ್ಪಣೆ ವಿಧಿಸಿದ್ದರಿಂದ ಛಾಯಾಗ್ರಾಹಕರಿಗೆ ಬುಕ್ ಆಗಿದ್ದ ಎಲ್ಲ ಕಾರ್ಯಕ್ರಮಗಳು ರದ್ದಾಗಿವೆ. ಹೀಗಾಗಿ ಇದೇ ವೃತ್ತಿಯನ್ನು ನಂಬಿ ಬದುಕುತ್ತಿರುವ ಸಾವಿರಾರು ಕುಟುಂಬಗಳು ಬೀದಿ ಪಾಲಾಗುವ ಪರಿಸ್ಥಿತಿ ನಿರ್ವಣವಾಗಿದೆ. ಮುಖ್ಯಮಂತ್ರಿಗಳು ವಿವಿಧ ವೃತ್ತಿಪರ ಶ್ರಮಿಕರಿಗೆ ಘೊಷಿಸಿದಂತೆ ವೃತ್ತಪರ ಛಾಯಾಗ್ರಾಹಕರಿಗೆ ವಿಶೇಷ ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಿದರು. ನಾಮದೇವ ಪೂಜಾರ, ರಮೇಶ ಚಿಕ್ಕತೋಟದ, ಬಿ.ಎಸ್. ಪಾಟೀಲ, ಈರಣ್ಣ ಚಕ್ರಸಾಲಿ, ಶಿವು ಚಿಕ್ಕತೋಟದ, ಸಮೀರ ಮುಲ್ಲಾ, ಸತೀಶ ಪರಬತ್, ಮಲ್ಲಿಕಾರ್ಜುನ ರೇವಣಕಿ, ಸುನೀಲ ದಬಗೊಂದಿ, ಮಹೇಶ ಸೊನಗೋಜಿ, ಸುರೇಶ ಮಾಂಡ್ರೆ, ರಮೇಶ ಮಾಯಣ್ಣವರ, ದೇವೇಂದ್ರ ಕುದರಿ, ಚಂದ್ರು ಕುಸ್ಲಾಪುರ, ವೆಂಕಟೇಶ ಸೊಪ್ಪಿನ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net