

---
ಕಾರು, ಬಸ್‌ಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆಯೂ ಇದೆ.
ಕಳೆದ ಎರಡು ವರ್ಷಗಳ ಹಿಂದೆ ಈ ಹೋಟೆಲ್ ನಿರ್ಮಾಣಕ್ಕೆ ಕಾರ್ಯಾದೇಶವಾಗಿತ್ತು. ಚಿತ್ರದುರ್ಗ-ದಾವಣಗೆರೆ ಎನ್‌ಎಚ್ 48ರ ಮಾರಘಟ್ಟ ಸರ್ವೆ ನಂ.55ರ ಎರಡು ಎಕರೆ ಪ್ರದೇಶದಲ್ಲಿ 1801 ಚದರಡಿ ವಿಸ್ತೀಣದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಸುಸಜ್ಜಿತ ಕೊಠಡಿ ಗಳೊಂದಿಗೆ, ವಾಣಿಜ್ಯ ಮಳಿಗೆ, ವೆಜ್ ಮತ್ತು ನಾಜ್‌ವೆಜ್ ಕಿಚನ್‌ಗಳು, ಫುಡ್‌ಕೌಂಟರ್‌ಗಳು, ತಾಯಿ ಮಗು ಆರೈಕೆ ಕೊಠಡಿ, ಡೈನಿಂಗ್ ಹಾಲ್, ಸಾರ್ವಜನಿಕ ಶೌಚಗೃಹ ಇತ್ಯಾದಿ ಮೂಲ ಸೌಕರ್ಯಗಳಿವೆ.
ಪ್ರವಾಸೋದ್ಯಮ ಇಲಾಖೆ ನಿರ್ದೇಶಕರೂ ಆಗಿರುವ ನಿಗಮದ ಎಂಡಿ ಕೆ.ವಿ. ರಾಜೇಂದ್ರಪ್ರಸಾದ್ ಅವರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ ಬಳಿಕ ನಿಗಮದಿಂದ ನಡೆಸುವುದೊ ಅಥವಾ ಟೆಂಡರ್ ಕರೆಯಬೇಕೋ ಎಂಬ ವಿಚಾರ ಇತ್ಯರ್ಥವಾಗಲಿದೆಯಂತೆ.
ನಿಗಮದಿಂದಲೇ ಹೋಟೆಲ್ ನಡೆಸಲಾಗುವುದೊ ಅಥವಾ ಟೆಂಡರ್ ಕರೆದು ಖಾಸಗಿಯವರಿಗೆ ವಹಿಸುವ ಕುರಿತಂತೆ ಮೇಲಧಿಕಾರಿಗಳೇ ತಿಳಿಸಬೇಕಿದೆ ಎಂದು ಕೆಎಸ್‌ಟಿಡಿಸಿ ಮೂಲಗಳು ತಿಳಿಸಿವೆ. ಯಾರು ಹೋಟೆಲ್ ನಡೆಸುತ್ತಾರೆಂಬುದು ನಿರ್ಧಾರವಾದ ಬಳಿಕ ಇಲ್ಲಿರುವ ಐಷಾರಾಮಿ ಎಂಟು ಕೊಠಡಿಗಳು ಹಾಗೂ ಊಟ, ಉಪಹಾರ ದರಗಳು ನಿಗದಿಯಾಗಲಿವೆಯಂತೆ.
ಕೆಎಸ್‌ಟಿಡಿಸಿ ಸೂಚನೆ ಮೇರೆಗೆ ಸಣ್ಣಪುಟ್ಟ ಕಾಮಗಾರಿಗಳನ್ನೂ ಪೂರ್ಣಗೊಳಿಸಿ ಕಾರ್ಪೋರೇಷನ್‌ಗೆ ವಹಿಸಲಾಗಿದೆ. ಹೋಟೆಲ್ ಆರಂಭಕ್ಕೆ ಕಾರ್ಪೋರೇಷನ್ ಕ್ರಮ ವಹಿಸಬೇಕಿದೆ.
ಲೋಕೋಪಯೋಗಿ ಇಲಾಕೆ ಕಟ್ಟಡ ನಿರ್ಮಿಸಿ ಮೂರ‌್ನಾಲ್ಕು ತಿಂಗಳು ಕಳೆದಿದ್ದರೂ ಸೂಕ್ತ ನಿರ್ದೇಶನ ಇಲ್ಲದ ಕಾರಣ ಅದನ್ನು ಹಸ್ತಾಂತರ ಮಾಡಿಕೊಳ್ಳಲು ಪ್ರವಾಸೋದ್ಯಮ ಇಲಾಖೆ ಹಿಂದೇಟು ಹಾಕಿತ್ತು. ಪ್ರವಾಸೋದ್ಯಮ ಇಲಾಖೆಯ ಚಿತ್ರದುರ್ಗ ಸಹಾಯಕ ನಿರ್ದೇಶಕ ಬಿ.ಎಚ್. ಶಶಿಕುಮಾರ್ ಅವರು ಕಳೆದ ಮೇ 23 ರಂದು ಪಿಡಬ್ಲೂೃಡಿಯಿಂದ ಹೋಟೆಲ್ ಹಸ್ತಾಂತರ ಮಾಡಿಕೊಂಡು, 28 ರಂದು ಕೆಎಸ್‌ಟಿಡಿಸಿಗೆ ವಹಿಸಿಕೊಟ್ಟಿದ್ದಾರೆ.
ಚಿತ್ರದುರ್ಗ: ಕುಟೀರ ಯೋಜನೆಯಡಿ ನಗರದ ಹೊರವಲಯದ ಸೀಬಾರ ಸಮೀಪದ ಮಾರಘಟ್ಟದಲ್ಲಿ 8.33 ಕೋಟಿ ರೂ. ವೆಚ್ಚದೊಂದಿಗೆ ನಿರ್ಮಿಸಿದ ಹೋಟೆಲ್ ಅನ್ನು ಲೋಕೋಪಯೋಗಿ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆ ಹಸ್ತಾಂತರಗೊಂಡಿದೆ. ಜತೆಗೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‌ಟಿಡಿಸಿ)ದ ಸುಪರ್ದಿಗೆ ವಹಿಸಲಾಗಿದೆ.