ಕುಖ್ಯಾತ ಸುಲಿಗೆಕೋರರ ಗ್ಯಾಂಗ್ ಅರೆಸ್ಟ್; ಎಸ್‌ಪಿ ರವಿ.ಡಿ.ಚನ್ನಣ್ಣನವರ್ ಮಾಹಿತಿ ಕೃಷಿನಿರತ ಒಂಟಿ ಮಹಿಳೆಯರೇ ಟಾರ್ಗೆಟ್

17 Nela ph 01 SP Press Meet
Published on

ನೆಲಮಂಗಲ: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚುತ್ತಿದ್ದ ಕುಖ್ಯಾತ ತಂಡವನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದಲ್ಲದೆ ಸುಲಿಗೆ, ಸರ ಅಪಹರಣ, ಮನೆಗಳವು ಸೇರಿ 23 ಅಪರಾಧ ಪ್ರಕರಣಗಳನ್ನು ಭೇದಿಸಿರುವ ಮಾದನಾಯಕನಹಳ್ಳಿ ಪೊಲೀಸರು 5 ಆರೋಪಿಗಳನ್ನು ಬಂಧಿಸಿದ್ದಾರೆ.

ಮಾದನಾಯಕನಹಳ್ಳಿ ಠಾಣೆ ಆವರಣದಲ್ಲಿ ಸುಲಿಗೆ ಪ್ರಕರಣಗಳ ಪತ್ತೆ, ಆರೋಪಿಗಳ ಬಂಧನ ಹಿನ್ನೆಲೆಯಲ್ಲಿ ಉಪವಿಭಾಗದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್ಣನವರ್ ಮಾಹಿತಿ ನೀಡಿದರು.

ಬೆಂಗಳೂರು ದಕ್ಷಿಣ ತಾಲೂಕು ಬೈಚಕುಪ್ಪೆ ಗ್ರಾಮದ ಎನ್.ಎನ್.ಸಿದ್ದರಾಮಯ್ಯ (31), ಬೆಂಗಳೂರು ಉತ್ತರ ತಾಲೂಕು ತರಬನಹಳ್ಳಿ ನಿವಾಸಿ ಮಹಂತೇಶ (26), ಬೆಂಗಳೂರು ಅಗ್ರಹಾರ ದಾಸರಹಳ್ಳಿ ನಿವಾಸಿ ಎಲ್.ಸಂಜಯ್ (24), ತುರುವೇಕೆರೆ ತಾಲೂಕು ತಾಳೆಕೆರೆ ಗ್ರಾಮದ ನಿವಾಸಿ ಶೇಖರ್ (23), ಬೆಂಗಳೂರು ಉತ್ತರ ತಾಲೂಕು ಶಿವನಪುರ ಗ್ರಾಮದ ಮನೆಗಳವು ಪ್ರಕರಣದಲ್ಲಿ ಬಾಲಪರಾಧಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಂದ 34.74 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಸೇರಿ ಕೃತ್ಯಕ್ಕೆ ಬಳಸಿದ್ದ ಮೊಬೈಲ್, ದ್ವಿಚಕ್ರವಾಹನ, ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಪ್ರಕರಣ 1: ಬೆಂಗಳೂರು ಉತ್ತರ ತಾಲೂಕು ಕೆಂಗನಹಳ್ಳಿ ಕೆರೆ ಅಂಗಳದಲ್ಲಿ ಹಸು ಮೇಯಿಸುತ್ತಿದ್ದ ವೇಳೆ ಎನ್.ಎನ್.ಸಿದ್ದರಾಮಯ್ಯ ಹಾಗೂ ಮಹಂತೇಶ ಸೇರಿ ಶಾರದಮ್ಮ ಎಂಬ ಮಹಿಳೆ ಮೇಲೆ ಹಲ್ಲೆ ಮಾಡಿ 45 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು.

ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 11 ಸುಲಿಗೆ, ಗ್ರಾಮಾಂತರ 1, ತ್ಯಾಮಗೊಂಡ್ಲು 1, ತಾವರೆಕೆರೆ ಠಾಣೆ 2, ಬೆಂಗಳೂರು ಉತ್ತರ ತಾಲೂಕು ಸೋಲದೇವನಹಳ್ಳಿ 2 ಸೇರಿ ಒಟ್ಟು 17 ಸುಲಿಗೆ ಪ್ರಕರಣ ಸೇರಿ ಬಿಡದಿ ಠಾಣಾ ವ್ಯಾಪ್ತಿಯ ಸುಲಿಗೆ ಪ್ರಕರಣಗಳಲ್ಲ್ಲೂ ಭಾಗಿಯಾಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಪ್ರಕರಣ 2.

ಬೆಂಗಳೂರು ಉತ್ತರ ತಾಲೂಕು ಕಡಬಗೆರೆ ಗೇಟ್ ಬಳಿ ಪಿನೋ ಪೇಮೆಂಟ್ಸ್ ಬ್ಯಾಂಕಿನಲ್ಲಿ ಹಣ ವರ್ಗಾವಣೆ ಏಜೆನ್ಸಿ ಮಾಡಿಕೊಂಡಿದ್ದ ಅಶೋಕ್ ಎಂಬುವರಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ 12 ಲಕ್ಷ ರೂ. ಅಪಹರಿಸಿದ್ದ ಆರೋಪಿ ಎಲ್.ಸಂಜಯ್ ಹಾಗೂ ಶೇಖರ್ ಅವರು ಹಣದ ವ್ಯವಹಾರ ಗಮನಿಸಿ ಈ ಕೃತ್ಯ ಎಸಗಿದ್ದರು.

ನೆರವಿಗೆ ಬಂದ ರೇಖಾಚಿತ್ರ: ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ ಮಹಿಳೆ ಆರೋಪಿಗಳ ಚಹರೆ ಮಾತನಾಡುತ್ತಿದ್ದ ಭಾಷೆ ಬಗ್ಗೆ ಮಾಹಿತಿ ನೀಡಿದ್ದರು. ಇದನ್ನು ಆಧರಿಸಿ ರೇಖಾಚಿತ್ರ ಸಿದ್ಧಪಡಿಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಲಿದ್ದಾರೆ.

ವಿಶೇಷ ತಂಡ: ಜಿಲ್ಲಾ ಎಸ್‌ಪಿ ರವಿ.ಡಿ.ಚೆನ್ನಣ್ಣನವರ್ ಹಾಗೂ ಡಿವೈಎಸ್‌ಪಿ ಮೋಹನ್‌ಕುಮಾರ್ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಕೆ.ಪಿ.ಸತ್ಯನಾರಾಯಣ ನೇತೃತ್ವದಲ್ಲಿ ಎಸ್‌ಐ ಎಂ.ಎನ್.ಮುರುಳಿ ಪ್ರೋಬೆಷನರಿ ಎಸ್‌ಐ ಎಸ್.ಕೆ.ಬೆಳ್ಳುಂಡಗಿ, ಎ.ಎಸ್.ಐ ನಿಂಗರಾಜೇಗೌಡ, ಹಿರಿಯ ಪೇದೆ ನಾರಾಯಣಸ್ವಾಮಿ, ಮಲ್ಲಗೊಂಡಿ, ಉಮೇಶ್, ಇಮ್ರಾನ್‌ಖಾನ್, ಸಿಬ್ಬಂದಿ ಲಕ್ಷ್ಮಣ್, ರವಿಕುಮಾರ್ ವಿಶೇಷ ತಂಡ ರಚಿಸಿ ಅರೋಪಿಗಳನ್ನು ಪತ್ತೆ ಹಚ್ಚಿದ್ದು ಪೊಲೀಸ್ ಇಲಾಖೆ ಬಹುಮಾನ ೋಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net