

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತದಲ್ಲಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಶೇ.97 ಫಲಿತಾಂಶ ಪಡೆದಿದೆ.
415 ವಿದ್ಯಾರ್ಥಿಗಳ ಪೈಕಿ 402 ಮಂದಿ ತೇರ್ಗಡೆಯಾಗಿದ್ದಾರೆ. 68 ಡಿಸ್ಟಿಂಕ್ಷನ್, 264 ಪ್ರಥಮ ಶ್ರೇಣಿ ಲಭಿಸಿದೆ. ವಿಜ್ಞಾನ ವಿಭಾಗಕ್ಕೆ ಶೇ.96, ಗಣಕ ವಿಜ್ಞಾನಕ್ಕೆ ಶೇ.98, ವಾಣಿಜ್ಯ ಮತ್ತು ಕಲಾ ವಿಭಾಗಕ್ಕೆ ಶೇ.97 ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ ಸೂರಜ್(581), ಧನ್ಯಾ ಎ.(572), ಎಂ.ಯು.ಕೀರ್ತನ್(570), ತನುಶ್ರೀ ಕೆ.ಎಸ್.(561), ಛಾಯಾ ಎಂ.ಜೆ.(560), ವಿನ್ಯಾ ಕೆ.(559), ಇಂಚರಾ ಕೆ.ವಿ.(558), ಭಾನಶ್ರೀ ಎಚ್.(558) ಅಂಕ ಪಡೆದಿದ್ದಾರೆ.
ಗಣಕ ವಿಜ್ಞಾನದಲ್ಲಿ ಸಾನಿಕಾ ಎನ್.ಎಚ್.(575), ಗಗನ್ ಡಿ.ಕೆ.(564), ಸಿಂಚನಾ(556), ಶ್ರೇಯಾ ಕೆ.ಎಸ್.(555), ಹರೀಶ್ ಕೆ.ಎಸ್.(555) ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪ್ರೀತಿ ಆರ್.ಕೆ.ರೈ(573), ದೇವಿಕಾ (547), ಪೂಜಾಶ್ರೀ (545), ಸ್ವಪ್ನಾ(540), ಕಲಾ ವಿಭಾಗದಲ್ಲಿ ವರ್ಷಿಣಿ ಕೆ.(565), ಶ್ರೇಯಾ ಕೆ.(565), ಪ್ರೀತಿ ಡಿ.ವಿ.(563), ಭವ್ಯಾ ಎಸ್.(534), ಪುನೀತ್ ಪಿ.ಜಿ.(529) ಅಂಕ ಪಡೆದಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮತ್ತು ವಿದ್ಯಾಸಂಸ್ಥೆ ಕಾರ್ಯದರ್ಶಿ ಅರವಿಂದ ಅಯ್ಯಪ್ಪ ಸುತಗುಂಡಿ, ಪ್ರಾಚಾರ್ಯ ಸೋಮಶೇಖರ ನಾಯಕ್ ಅವರು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರನ್ನು ಅಭಿನಂದಿಸಿದ್ದಾರೆ.