ಕುಕ್ಕರ್​ ಸ್ಫೋಟಿಸಿ ಅಡುಗೆ ಸಹಾಯಕಿ ಗಂಭೀರ ಗಾಯ

Published on

ಮಧುಗಿರಿ: ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸುವಾಗ ಕುಕ್ಕರ್​ ಸ್ಫೋಟಿಸಿ ಅಡುಗೆ ಸಹಾಯಕಿ ಗಂಭೀರ ಗಾಯಗೊಂಡಿರುವ ಟನೆ ತಾಲೂಕಿನ ಪುರವರದಲ್ಲಿ ನಡೆದಿದೆ. ತಾಲೂಕಿನ ಪುರವರ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಮಧ್ಯಾಹ್ನದ ಬಿಸಿಯೂಟ ತಯಾರಿಸುವಾಗ ಕುಕ್ಕರ್​ ಸ್ಫೋಟಗೊಂಡಿದ್ದು, ಅಡುಗೆ ಸಹಾಯಕಿ ಉಮಾದೇವಿ (52) ಗಂಭೀರಗಾಯಗೊಂಡಿದ್ದಾರೆ. ಗುಣಮಟ್ಟದ ಕುಕ್ಕರ್​ ಕೊಡದೇ ಇರುವುದು ಟನೆ ಕಾರಣ ಎಂಬುದು ಎಸ್​ಡಿಎಂಸಿ ಸದಸ್ಯರ ಆರೋಪವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net