ಕುಂಭಮೇಳದಲ್ಲಿ ತೆಗೆದುಕೊಂಡ ನಿರ್ಣಯ ಅನುಷ್ಠಾನಗೊಳಿಸಿ

11 ckm 5 nagesh angirasa
ಕಾಮಧೇನು ಗೋ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ್ ಅಂಗೀರಸ
Published on

ಚಿಕ್ಕಮಗಳೂರು: ಭಾರತೀಯ ಗೋವಂಶ ರಕ್ಷಣಾ, ವಿಶ್ವ ಹಿಂದೂ ಪರಿಷತ್ ಗೋರಕ್ಷಾ ವಿಭಾಗದಿಂದ ಪ್ರಯಾಗ್‌ರಾಜ್‌ನ ಮಾಹಾಕುಂಭಮೇಳದಲ್ಲಿ ಗೋರಕ್ಷಣೆ ಸಂಬAಧ ತೆಗೆದುಕೊಂಡಿರುವ ನಿರ್ಣಯಗಳನ್ನು ರಾಜ್ಯ, ಕೇಂದ್ರ ಸರ್ಕಾರಗಳು ಅನುಷ್ಠಾನ ಮಾಡುವಂತೆ ಕಾಮಧೇನು ಗೋ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ್ ಅಂಗೀರಸ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನವಾದ ದೇಶ. ಗೋವು ಇದರ ಆತ್ಮ ಹಾಗೂ ಗೋ ಸಂವರ್ಧನೆ ಕೇವಲ ಧಾರ್ಮಿಕ ಭಾವನೆಯ ವಿಷಯವಲ್ಲ. ದೇಶದ ಆರ್ಥಿಕ ವ್ಯವಸ್ಥೆ, ಪರಿಸರ ಸಮತೋಲನ, ಸಾವಯವ ಕೃಷಿ ಮತ್ತು ಸಾಂಸ್ಕೃತಿಕ ಪರಂಪರೆಯು ಅತ್ಯಂತ ಮಹತ್ವ ಪೂರ್ಣವಾಗಿದೆ ಎಂದರು.

ಗೋ ರಕ್ಷಣೆಯಿಂದಲೇ ಸಾಮಾಜಿಕ, ಆರ್ಥಿಕ ಮತ್ತು ಆಧ್ಯಾತ್ಮಿಕ ಉನ್ನತಿ ಸಾಧ್ಯ. ದುರಾದೃಷ್ಟ ಎಂದರೆ ಗೋವುಗಳಿಗೆ ಆಶ್ರಯವಾಗಿದ್ದ ಗೋ ಮಾಳಗಳ ಅತಿಕ್ರಮಣ, ಗೋ ವಧೆ, ಗೋಮಯ ಮತ್ತು ಹಾಲು ಉತ್ಪಾದನೆಯ ಜಾಲದಲ್ಲಿ ಸಿಲುಕಿ ಭಾರತೀಯ ತಳಿಗಳನ್ನು ವಿದೇಶಿ ತಳಿಗಳೊಂದಿಗೆ ಸಂಯೋಗಗೊಳಿಸಿ ಭಾರತೀಯ ಗೋ ತಳಿಗಳನ್ನು ನಾಶ ಮಾಡಲಾಗುತ್ತಿದೆ ಎಂದು ವಿಷಾಧಿಸಿದರು.

ಈ ನಿಟ್ಟಿನಲ್ಲಿ ಪ್ರಯಾಗರಾಜ್ ಸಂಗಮದಲ್ಲಿ ವಿಶ್ವಹಿಂದೂ ಪರಿಷತ್ ಗೋರಕ್ಷಾ ವಿಭಾಗ, ಭಾರತೀಯ ಗೋವಂಶ ರಕ್ಷಣಾ ಸಂವರ್ಧನ ಪರಿಷತ್ ನೇತೃತ್ವದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಗೋಭಕ್ತ ಅಧಿವೇಶನದಲ್ಲಿ ಗೋರಕ್ಷಣೆ, ಗೋವಂಶ ಸಂವರ್ಧನೆ, ಗೋಮಾಳ ಭೂರಕ್ಷಣೆ ಮಾಡಲು ಸಂಕಲ್ಪ ಮಾಡಲಾಗಿದೆ. ಅದರಂತೆ ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಅವುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಗೋವನ್ನು ರಾಷ್ಟಿçÃಯ ಸಂಪತ್ತು ಎಂದು ಘೋಷಿಸಬೇಕು. ಭಾರತೀಯ ಗೋತಳಿಯನ್ನು ಸಂರಕ್ಷಣೆ ಮಾಡಲು ಗೋ ಸಂವರ್ಧನೆ ಮಂತ್ರಾಲಯ ಸ್ಥಾಪಿಸಬೇಕು. ಗೋ ಹತ್ಯೆ ತಡೆಗಟ್ಟಲು ಪ್ರಬಲ ಕಾನೂನು ಜಾರಿಗೆ ತರಬೇಕು. ಗೋಮಾಳಗಳ ಉಳಿವಿಗೆ ಗೋಮಾಳ ಪ್ರಾಧಿಕಾರ ರಚಿಸಬೇಕು ಎಂದು ಒತ್ತಾಯಿಸಿದರು.

ಕಸಾಯಿ ಖಾನೆ ಸ್ಥಾನದಲ್ಲಿ ಗೋ ಅಭಯಾರಣ್ಯ ಸ್ಥಾಪಿಸಬೇಕು. ಮಾಂಸದ ರಫ್ತು ನೀತಿಯಲ್ಲಿ ಸಂಶೋಧನೆ ಮತ್ತು ಭಾರತದಿಂದ ರಫ್ತಾಗುವ ಗೋಮಾಂಸವನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸಬೇಕು. ಗೋವಂಶ ಅರ್ಥವ್ಯವಸ್ಥೆ ಪ್ರೋತ್ಸಾಯಿಸಬೇಕು. ಗೋವಂಶ ಸಂರಕ್ಷಣೆ ಬಗ್ಗೆ ವಿದ್ಯಾಲಯ ಮತ್ತು ಮಹಾವಿದ್ಯಾಲಯದಲ್ಲಿ ಪಠ್ಯ ಅಳವಡಿಸಬೇಕು. ಗೋರಕ್ಷಣೆಯ ಕೇಸುಗಳ ಶೀಘ್ರ ಪರಿಹಾರಕ್ಕಾಗಿ ಪ್ರತ್ಯೇಕ ಕೋರ್ಟ್ ಸ್ಥಾಪಿಸಬೇಕು ಎಂಬುದು ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯಗಳಾಗಿದ್ದು, ಕೂಡಲೇ ಸರ್ಕಾರಗಳು ಈ ಬಗ್ಗೆ ಗಮನಹರಿಸಿ ಗೋತಳಿ ಸಂರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net