‘ಕುಂಭ ಸಂಭವ’ ಸಿನಿಮಾ ಶೀಘ್ರ ಬಿಡುಗಡೆ

mysore
Published on

ಮೈಸೂರು: ಮಿಲ್ಕಿ ಮೂನ್ ಮೂವೀಸ್ ಅಡಿಯಲ್ಲಿ ನಿರ್ಮಿಸಿರುವ ‘ಕುಂಭ ಸಂಭವ’ ಚಲನಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ನಾಗೇಶ್ ತಿಳಿಸಿದರು.

ಚಿತ್ರಕಥೆ ಸಮಾಜವನ್ನು ಕಾಡುತ್ತಿರುವ ಹೆಣ್ಣು ಭ್ರೂಣ ಹತ್ಯೆ ವಿಷಯ ಹೊಂದಿದೆ. ಇದರ ಚಿತ್ರೀಕರಣ ಪೂರ್ಣಗೊಂಡಿದೆ ಎಂದು  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2023-24ರಲ್ಲಿ ಮಂಡ್ಯದಲ್ಲಿ ಬೆಳಕಿಗೆ ಬಂದ ಭ್ರೂಣಹತ್ಯೆ ಕರ್ಮಕಾಂಡವನ್ನು ಕಥೆ ಆಧರಿಸಿದೆ. ಹಿರಿಯ ಕಲಾವಿದರಾದ ಶಂಕರ್ ಅಶ್ವತ್ಥ್, ಶಿವಾಜಿರಾವ್ ಜಾಧವ್ ಮೊದಲಾದವರು ನಟಿಸಿದ್ದಾರೆ.

ಆ ಘಟನೆ ಬೆಳಕಿಗೆ ಬಂದಾಗ ರಾಜಕಾರಣಿಗಳು ಸಮಾಜವನ್ನು ದಿಕ್ಕು ತಪ್ಪಿಸಿದುದು, ಪೊಲೀಸರು ನಿರ್ವಹಿಸಿದ ಪಾತ್ರದ ಕುರಿತು ಚಿತ್ರದಲ್ಲಿದೆ. ಎರಡು ಹಾಡು, ನಾಲ್ಕು ಹೊಡೆದಾಟದ ದೃಶ್ಯಗಳಿವೆ ಎಂದು ತಿಳಿಸಿದರು.

ಕಲಾವಿದರಾದ ಶಂಕರ್ ಅಶ್ವತ್ಥ್, ಶಿವಾಜಿರಾವ್ ಜಾಧವ್, ಪ್ರಿಯಾ, ಶೋಭಿತಾ, ಮಧು, ಲಿಂಗರಾಜು, ಕಮಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net