ಕುಂಭ ಮೆರವಣಿಗೆ ಅದ್ದೂರಿ

Untitled design (44)
Published on

ಹನುಮಸಾಗರ: ಸಮೀಪದ ಹಾಬಲಕಟ್ಟಿ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಬುಧವಾರ ಕುಂಭ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶರಣಬಸವೇಶ್ವರ ಭಾವಚಿತ್ರ ಮೆರವಣಿಗೆ ಹಾಗೂ 108 ಕುಂಭಗಳ ಮೆರವಣಿಗೆ ನಡೆಯಿತು. ವಾರಿಕಲ್ ಗ್ರಾಮದಿಂದ ಕಳಸ ಹಾಗೂ ಗಡಚಿಂತಿ ಗ್ರಾಮದಿಂದ ಹಗ್ಗವನ್ನು ಮೆರವಣಿಗೆ ಮೂಲಕ ಗ್ರಾಮಕ್ಕೆ ತರಲಾಯಿತು. ಸಂಜೆ ಸಾವಿರಾರು ಶರಣಬಸವೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಮುಖಂಡರಾದ ಸಂಗಪ್ಪ ಹೆಬ್ಲಿ, ಶರಣಪ್ಪ ಅಕ್ಕೇರಿ, ಸಂಗಪ್ಪ ಬಡಿಗೇರ, ಮಹೇಶ ಹವಾಲ್ದಾರ, ಬಸವರಾಜ ಬಿ. ಗಡಾದ, ಅಂದಪ್ಪ ಹೆಬ್ಲಿ, ಮುತ್ತಣ್ಣ ಹವಲ್ದಾರ, ಶರಣಯ್ಯ ಹಿರೇಮಠ, ಶಿವಶರಣಯ್ಯ ಹೆಬ್ಲಿ, ಸಂಜೀವ ತಳ್ಳಿಕೇರಿ, ಶರಣಪ್ಪ ಅಂಗಡಿ, ಸಂಗಪ್ಪ ಮುಗಳಿ, ಶಂಕರ ಗಡಾದ, ರಾಮಪ್ಪ ಸೂಡಿ, ಶರಣಪ್ಪ ಗೌಡ್ರ, ಬಸು ಭೋವಿ, ಈರಪ್ಪ ಜಿಂಗಿ, ಶರಣಪ್ಪ ಹೆಬ್ಲಿ, ಗಂಗಯ್ಯ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net