ಕುಂದುಕೊರತೆಗಳ ಶೀಘ್ರ ನಿವಾರಣೆಗೆ ಡಿಸಿ ತಾಕೀತು

CTD 6 KRIDANGANA--03
Published on

ಚಿತ್ರದುರ್ಗ: ನಗರದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ಶುಕ್ರವಾರ ಸಂಜೆ ಭೇಟಿ ನೀಡಿ ಪರಿಶೀ ಲನೆ ನಡೆಸಿ, ಅಲ್ಲಿರುವ ಹಲವು ಕುಂದುಕೊರತೆಗಳನ್ನು ಶೀಘ್ರ ಪರಿಹರಿಸುವಂತೆ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಾಕಿಂಗ್ ಹಾಗೂ ಕ್ರೀಡಾಭ್ಯಾಸಕ್ಕೆಂದು ಬಂದಿದ್ದವರೊಂದಿಗೆ ಸಮಾಲೋಚನೆ ನಡೆಸಿದ ಡಿಸಿ,ಕುಂದುಕೊರತೆಗಳ ಮಾಹಿತಿ ಪಡೆದರು. ಕ್ರೀಡಾಂ ಗಣದಲ್ಲಿ ವಿದ್ಯುತ್‌ದೀಪ,ಕುಡಿಯುವ ನೀರಿನ ಕೊರತೆ ಇದ್ದು, ಎರಡು ದಿನಗಳ ಒಳಗೆ ವಿದ್ಯುತ್ ದೀಪದ ವ್ಯವಸ್ಥೆಯನ್ನು ಸರಿಪಡಿಸಲು ಸೂಚಿಸಿದರು.
ಶುದ್ಧ ಕುಡಿಯುವ ನೀರು ಪೂರೈಸಬೇಕು. ಬೆಳಗ್ಗೆ ಹಾಗೂ ಸಂಜೆ ವಾಕಿಂಗ್‌ಗೆ ಬರುವವರ ಸಂಖ್ಯೆ ಹೆಚ್ಚಿದ್ದು,ಪ್ರತ್ಯೇಕ ವಾಕಿಂಗ್ ಪಥದ ನಿರ್ಮಾ ಣಕ್ಕೆ ಹಾಗೂ ಅಗತ್ಯ ಕ್ರೀಡಾ ಪರಿಕರಗಳ ಖರೀದಿಗೆ ಸಂಬಂಧಿಸಿದಂತೆ ವಿಸ್ತೃತ ವರದಿಗೆ ಸೂಚಿಸಿದರು. ಒಳಾಂಗಣ ಈಜುಕೊಳಕ್ಕೆ ಭೇಟಿ ನೀಡಿ ಪರಿ ಶೀಲನೆ ನಡೆಸಿದ ಡಿಸಿ, ಸಾರ್ವಜನಿಕರಿಗೆ ಈಜುಕೊಳ ಶೀಘ್ರ ಲಭ್ಯವಾಗ ಬೇಕೆಂದರು. ವಿನಾಕಾರಣ ನೆಪಗಳನ್ನು ಹೇಳಿ ವಿಳಂಬ ಮಾಡಿದರೆ ಸಹಿ ಸಲಾಗದೆಂದು ಅಧಿಕಾರಿಗಳನ್ನು ಎಚ್ಚರಿಸಿದರು. ಜಿ.ಪಂ.ಸಿಇಒ ಸೋಮಶೇಖರ್,ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತನಾ ನೆ ಲವಿಗಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net