

ಚಿಕ್ಕಮಗಳೂರು: ನಗರಕ್ಕೆ ಸಮೀಪದ ಅಂಬಳೆ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳಿಗೆ ಎಂದು ಭೂಮಿ ಮಂಜೂರು ಮಾಡಿಸಿಕೊಂಡು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಳಸಿಕೊಳ್ಳುತ್ತಿರುವವರ ಬಗ್ಗೆ ವಿಧಾನಸೌಧದಲ್ಲಿ ಇರುವ ಕುಂದುಕೊರತೆ ಇಲಾಖೆಗೆ ಸಾರ್ವಜನಿಕರ ಪರವಾಗಿ ದಾಖಲೆ ಸಹಿತ ದೂರು ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷೆ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕೈಗಾರಿಕೆಗಳ ಸ್ಥಾಪನೆಗೆ ಎಂದು ನೂರಾರು ಎಕರೆ ಜಾಗವನ್ನು ಕೈಗಾರಿಕೋದ್ಯಮಿಗಳಿಗೆ ಮಂಜೂರು ಮಾಡಿದೆ. ಆದರೆ ಮಂಜೂರಾದ ಭೂಮಿಯನ್ನು ಅನ್ಯ ಉದೇಶಕ್ಕೆ ಬಳಸಿಕೊಳ್ಳುವುದು ಮತ್ತು ಬೇರೆಯವರಿಗೆ ಒಳ ಒಪ್ಪಂದದ ಮೂಲಕ ಮಾರಾಟ ಮಾಡುವ ಮೂಲಕ ಸರ್ಕಾರ ಹಾಗೂ ಸಾರ್ವಜನಿಕರಿಗೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು.
ಅಂಬಳೆ ಕೈಗಾರಿಕಾ ಪ್ರದೇಶದಲ್ಲಿ ಸುಮಾರು ೧೪೨ ಎಕರೆ ಭೂಮಿಯನ್ನು ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡಿದ್ದು, ಭೂರಹಿತರು, ರೈತ ಕಾರ್ಮಿಕರು ಜಿಲ್ಲೆಯಲ್ಲಿ ಒಂದಿಷ್ಟು ಭೂಮಿ ಮಂಜೂರು ಮಾಡಿಸಿಕೊಳ್ಳುತ್ತಿಲ್ಲವಾದರೂ, ಯುವಕರು, ಕಾರ್ಮಿಕರಿಗೆ, ಮಹಿಳೆಯರಿಗೆ ಉದ್ಯೋಗಾವಕಾಶಗಳು ದೊರಕಬೇಕೆಂಬ ದೃಷ್ಟಿಯಿಂದ ಸರ್ಕಾರ ೧೪೨ ಎಕರೆ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗಾಗಿ ಕೆಐಎಡಿಬಿಗೆ ನೀಡಿದೆ. ಆದರೆ ಈ ಭೂಮಿಯಲ್ಲಿ ಉದ್ಯಮವನ್ನು ಪ್ರಾರಂಭಿಸದೆ, ಉದ್ಯೋಗವನ್ನು ಸೃಷ್ಟಿಸದೇ ಅನ್ಯಾಯವೆಸಗಲಾಗುತ್ತಿದೆ ಎಂದು ದೂರಿದರು.
ಕೆಐಎಡಿಬಿ ಈ ಭೂಮಿ ವಿತರಣೆಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿದಾರರುಗಳ ಕೈಗಾರಿಕಾ ಸ್ಥಾಪನೆಯ ನೀಲನಕ್ಷೆಯನ್ನು ಪಡೆದು ಉದ್ಯೋಗಾವಕಾಶಗಳ ಆಧಾರದಲ್ಲಿ ಅರ್ಜಿದಾರರಿಗೆ ಭೂಮಿಯನ್ನು ಹಂಚಿದೆ. ರಸ್ತೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳಿಗಾಗಿ ಒಂದಿಷ್ಟು ಜಾಗವನ್ನು ಮೀಸಲಿಟ್ಟು ೪೧ ಉದ್ಯಮಿಗಳಿಗೆ ೧೨೪ ಎಕರೆ ಜಾಗವನ್ನು ಹಂಚಲಾಗಿದೆ ಎಂದು ಮಾಹಿತಿ ನೀಡಿದರು.
ಭೂಮಿ ಮಂಜೂರಾದ ಮೂರು ವರ್ಷಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕೆಂಬ ನಿಯಮ ಇದ್ದರೂ, ಸುಮಾರು ೩೮ ಎಕರೆ ಜಾಗವನ್ನು ಮಂಜೂರು ಮಾಡಿಸಿಕೊಂಡಿರುವ ಬಯೋಟೆಕ್ನಾಲಜೀಸ್ ಎಂಬ ಹೆಸರಿನ ಸಂಸ್ಥೆ ಇದೂವರೆಗೂ ತಾವು ನೀಡಿರುವ ನೀಲನಕ್ಷೆ ಪ್ರಕಾರ ಕೈಗಾರಿಕೆ ಸ್ಥಾಪಿಸಿಲ್ಲ. ಬದಲಿಗೆ ಮಂಜೂರಾದ ಭೂಮಿಯನ್ನು ಸಾಮಿಲ್ ಸ್ಥಾಪಿಸಲು ಒಳ ಒಪ್ಪಂದದ ಮೂಲಕ ಮಾರಾಟ ಮಾಡಲಾಗಿದೆ ಎಂದು ದೂರಿದರು.
ಕೆಐಎಡಿಬಿ ಅವರು ಕೈಗಾರಿಕೆಗಳಿಗೆಂದು ಎಕರೆಗೆ ೧೩ ರಿಂದ ೧೫ ಲಕ್ಷ ರೂ. ಗಳಿಗೆ ಭೂಮಿ ಮಂಜೂರು ಮಾಡಿದ್ದು, ಈ ಭೂಮಿಯನ್ನು ರಿಯಲ್ ಎಸ್ಟೇಟ್ ಲಾಭಿಯಿಂದ ೨ ಕೋಟಿ ರೂ.ವರೆಗೂ ಒಳ ಒಪ್ಪಂದದ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಈ ಪ್ರದೇಶದಲ್ಲಿ ೬೦ ಕ್ಕೂ ಹೆಚ್ಚು ಸಾಮಿಲ್‌ಗಳು ಬಾಡಿಗೆಗೆ ಮತ್ತು ಸ್ವಂತಕ್ಕೆ ನಡೆಸಲಾಗುತ್ತಿದ್ದು, ಇದಲ್ಲದೆ ೩೮ ಎಕರೆ ಜಾಗದಲ್ಲೂ ಸಾಮಿಲ್ ಸ್ಥಾಪಿಸುವ ಉz್ದೆÃಶಕ್ಕೆ ಸದರಿ ಜಾಗವನ್ನು ತಲಾ ೨೦ ಲಕ್ಷ ರೂ. ಮುಂಗಡ ಪಡೆದು ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇದೆ ಎಂದರು.
ಈ ಜಾಗದಿಂದ ನೂರಾರು ಲೋಡ್ ಮಣ್ಣು ತೆರವುಗೊಳಿಸಲಾಗಿದ್ದರೂ, ಸಂಬAಧಪಟ್ಟ ಇಲಾಖೆಗಳು ಮೌನ ವಹಿಸಿವೆ. ಇವೆಲ್ಲವೂ ಸಂಶಯಕ್ಕೆ ಎಡೆಮಾಡಿದೆ. ಈ ಭೂ ಮಂಜೂರಾತಿ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಕೈಗಾರಿಕೆಗಳಿಗೆಂದು ಮಂಜೂರಾಗಿರುವ ಭೂಮಿಯನ್ನು ಅನ್ಯ ಉz್ದÉÃಶಕ್ಕೆ ಬಳಕೆ ಮಾಡಿದ್ದರೆ ಅಂತಹ ಭೂಮಂಜೂರಿಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲೇಶ್‌ಸ್ವಾಮಿ, ತನೂಜ್ ಕುಮಾರ್, ಜಯರಾಜ್ ಅರಸ್, ಸಂತೋಷ್ ಲಕ್ಯಾ, ಮಂಜುನಾಥ್, ರಾಕೇಶ್ ಉಪಸ್ಥಿತರಿದ್ದರು.