ಕುಂದುಕೊರತೆ ಆಲಿಸಿದ ಎಚ್.ಕೆ.ಸುರೇಶ್

28blrp3
Published on

ಬೇಲೂರು: ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಮದಘಟ್ಟ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಶಾಸಕ ಎಚ್.ಕೆ.ಸುರೇಶ್, ತಹಸೀಲ್ದಾರ್ ಎಂ.ಮಮತಾ ಗುರುವಾರ ಭೇಟಿ ನೀಡಿ, ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿದರು.


ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಮಕ್ಕಳು ವಸತಿ ನಿಲಯದಲ್ಲಿ ಉಳಿದುಕೊಂಡು ಅಧ್ಯಯನ ಮಾಡುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮವಾಗಿರಲಿದೆ. ವಿದ್ಯಾರ್ಥಿಗಳು ಒಡಗೂಡಿ ಬೆಳೆಯುವುದರಿಂದ ಮಾನಸಿಕವಾಗಿ ಧೈರ್ಯ ಹಾಗೂ ದೈಹಿಕ ಬೆಳವಣಿಗೆ, ಜ್ಞಾನ ಸಂಪಾದನೆಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಸಹ ಇಂತಹ ವಸತಿ ಶಾಲೆಗಳಲ್ಲಿ ದೊರಕುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಸಾಧನೆ ಮಾಡಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು


ವಸತಿ ಶಾಲೆಯಲ್ಲಿ ಉತ್ತಮ ಶಿಕ್ಷಣದೊಂದಿಗೆ, ಗುಣಮಟ್ಟದ ಊಟೋಪಾಹಾರ, ಸ್ವಚ್ಛತೆಗೆ ಪ್ರಾಂಶುಪಾಲರು, ವಾರ್ಡನ್‌ಗಳು ಆದ್ಯತೆ ನೀಡಬೇಕು ಎಂದು ನಿರ್ದೇಶನ ನೀಡಿದರು.

ಬಿಜೆಪಿ ಮುಖಂಡ ನಿಖಿಲ್, ವಿದ್ಯಾರ್ಥಿಗಳು ಇದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net