ಕುಂದುಕೊರತೆ ಆಲಿಕೆ ಕಚೇರಿ ಆರಂಭ

Jagirdar Office
Published on

ಚಿಟಗುಪ್ಪ: ಮನ್ನಾಎಖೇಳ್ಳಿಯಲ್ಲಿ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯP್ಷÀ ಸಂಜಯ ಜಾಗೀರದಾರ ಅವರು ಬೀದರ್ ದಕ್ಷಿಣ ಕ್ಷೇತ್ರದ ಎಲ್ಲ ಸಮುದಾಯಗಳ ಕುಂದುಕೊರತೆ ಆಲಿಕೆ ಕಚೇರಿ ಆರಂಭಿಸಿದ್ದಾರೆ. ಬುಧವಾರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದ ಜನರ ಕುಂದುಕೊರತೆ ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಕಚೇರಿ ಆರಂಭಿಸಲಾಗಿದೆ. ಏನೇ ಸಮಸ್ಯೆಗಳಿದ್ದರೂ ಜನ ಕಚೇರಿ ಅಥವಾ ನೇರವಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದರು. ಕಚೇರಿ ಸಿಬ್ಬಂದಿ ವಿದ್ಯಾರ್ಥಿಗಳ ಶಿಷ್ಯವೇತನ, ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತಿತರ ಸರ್ಕಾರದ ವಿವಿಧ ಯೋಜನೆಗಳ ಅರ್ಜಿ ಸಲ್ಲಿಕೆಗೆ ನೆರವಾಗುವುದರ ಜತೆಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.ಪ್ರಮುಖರಾದ ಪಾಸ್ಟರ್ ವಿಲ್ಸನ್, ಶಿರೋಮಣಿ, ಮೋಜಸ್, ಜೀವನ್ ಜಾಗೀರದಾರ, ಜಾಕೋಬ್ ಮುಸ್ತಾಪುರಕರ್, ಥಾಮಸ್, ಜಡಸನ್, ಧನರಾಜ, ರಿಜಾಯಿಸ್, ಯೇಸುದಾಸ, ಸುನೀಲ ಕೋಟೆ, ಮಹಾಂತೇಶ, ಜೇಮ್ಸ್, ಯೋಹಾನ್, ವಿಜಯಕುಮಾರ ಹಳ್ಳಿಖೇಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net