ಕುಂದಗೋಳ,ಸಂಶಿಯಲ್ಲಿ ಸೋಂಕು ಪ್ರದೇಶ ಸೀಲ್​ಡೌನ್

10 kdl2
Published on

ಕುಂದಗೋಳ: ಪಟ್ಟಣದಲ್ಲಿ ಎರಡು ಮತ್ತು ತಾಲೂಕಿನ ಸಂಶಿ ಗ್ರಾಮದಲ್ಲಿ ಮೂವರು ಕರೊನಾ ಸೋಂಕಿತರು ಪತ್ತೆಯಾಗಿದ್ದು ಸೇರಿ ಶುಕ್ರವಾರದವರೆಗೆ ತಾಲೂಕಿನಾದ್ಯಂತ ಒಟ್ಟು ಐದು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಇದರಿಂದಾಗಿ ಪಟ್ಟಣ ಹಾಗೂ ಸಂಶಿ ಗ್ರಾಮ ಸೇರಿ ಸುತ್ತಮುತ್ತಲಿನ ಗ್ರಾಮಗಳ ಜನತೆಯಲ್ಲಿ ಭಾರಿ ಆತಂಕ ಎದುರಾಗಿದೆ. ಪಟ್ಟಣದಲ್ಲಿ ಎರಡು ಪ್ರಕರಣಗಳು ಹುಬ್ಬಳ್ಳಿ-ಲಕ್ಷೆ್ಮೕಶ್ವರ ರಸ್ತೆಗೆ ಹೊಂದಿಕೊಂಡಿರುವ ಕಾಳಿದಾಸ ನಗರದ ಕರಿಸಿದ್ಧೇಶ್ವರ ಓಣಿಯಲ್ಲಿ ಒಬ್ಬ ಪುರುಷನಿಗೆ, ಅಂಬೇಡ್ಕರ್​ನಗರದ ಒಬ್ಬ ಮಹಿಳೆಗೆ ಹಾಗೂ ಸಂಶಿ ಗ್ರಾಮದಲ್ಲಿ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಈ ಮೂರು ಪ್ರದೇಶಗಳನ್ನು ಸಂಪೂರ್ಣವಾಗಿ ಸೀಲ್​ಡೌನ್ ಮಾಡಲಾಗಿದೆ.

ಕರೊನಾ ಸೋಂಕು ಹರಡದಂತೆ ಪಟ್ಟಣದಲ್ಲಿ ಸೋಂಕು ಕಂಡುಬಂದ ಪ್ರದೇಶವನ್ನು ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ ಕ್ರಿಮಿನಾಶಕ ಸಿಂಪಡಣೆ, ಬ್ಲಿಚಿಂಗ್ ಪೌಡರ್ ಸೇರಿ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net