ಕುಂಚಿಟಿಗರಿಗೆ ಒಬಿಸಿ ಮೀಸಲಾತಿ ನೀಡಿ

ಕುಂಚಿಟಿಗರಿಗೆ  ಒಬಿಸಿ ಮೀಸಲಾತಿ ನೀಡಿ
Published on

ಅರಕಲಗೂಡು: ಕುಂಚಿಟಿಗರಿಗೆ ಕುಲಶಾಸ್ತ್ರ ಅಧ್ಯಯನ ವರದಿ ಯಥಾವತ್ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರದ ಪ್ರವರ್ಗ 1 ಮತ್ತು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ನೀಡಿ ಕುಂಚಿಟಿಗರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ತಾಲೂಕು ಕುಂಚಿಟಿಗರ ಸಂಘ ವತಿಯಿಂದ ಸಮುದಾಯದ ಜನರು ಶುಕ್ರವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.


ರಾಜ್ಯದ 17 ಜಿಲ್ಲೆಗಳಲ್ಲಿ ಕುಂಚಿಟಿಗ ಜನಾಂಗ ವಾಸಿಸುತ್ತಿದ್ದು, ಕಳೆದ 28 ವರ್ಗಳಿಂದ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಕೈತಪ್ಪಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ನ?್ಟ ಉಂಟಾಗಿದೆ. ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಪ್ರವರ್ಗ 3ಎನಲ್ಲಿ ಬರುವ ಇತರೆ ಎಲ್ಲಾ ಜಾತಿಗಳಿಗೆ ಕೇಂದ್ರ ಒಬಿಸಿ ಮೀಸಲಾತಿ ನೀಡಿ ಕುಂಚಿಟಿಗರನ್ನು ಕೈಬಿಟ್ಟು ಮೀಸಲಾತಿ ತಾರತಮ್ಯ ಮಾಡಲಾಗಿದೆ. ಮೈಸೂರು ವಿಶ್ವವಿದ್ಯಾಲಯ ಸಿದ್ಧಪಡಿಸಿರುವ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವ ಮೂಲಕ ಕುಂಚಿಟಿಗರಿಗೆ ರಾಜ್ಯ ಸರ್ಕಾರದ ಪ್ರವರ್ಗ 1 ಮತ್ತು ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿ ಕಲ್ಪಿಸಬೇಕು.

ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಬಹುತೇಕ ಹಳ್ಳಿಗಾಡಿನ ಕುಗ್ರಾಮಗಳಲ್ಲಿ ನೆಲೆಸಿ ಪಶುಸಂಗೋಪನೆ, ಹೈನುಗಾರಿಕೆ, ಕೂಲಿ ಮತ್ತು ಕೃಷಿಯನ್ನು ಅವಲಂಬಿಸಿ ಜೀವನ ಮಾಡುತ್ತಿದ್ದು, ಮಳೆ ಅಭಾವ, ವಿದ್ಯುತ್ ಅಭಾವ, ಅತೀವೃಷ್ಟಿ, ಅನಾವೃಷ್ಟಿಯಿಂದ ಬೆಳೆನ?್ಟವಾಗಿ ಬ್ಯಾಂಕಿನ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕುಂಚಿಟಿಗ ರೈತಾಪಿ ಮಕ್ಕಳೂ ಕೂಡ ಹಗಲು ರಾತ್ರಿ ಎನ್ನದೆ ಜಮೀನಿನಲ್ಲಿ ಕೆಲಸ ಮಾಡಿಕೊಂಡು, ಸಾರಿಗೆ ಸೌಕರ್ಯವಂಚಿತ ಪ್ರದೇಶದಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಶಾಲೆಗಳಲ್ಲಿ ಸಿಗುವ ಅರೆಕಾಲಿಕ ಶಿಕ್ಷಣ ಪಡೆದು, ಸ್ಥಿತಿವಂತರ ಮಕ್ಕಳ ಜತೆ ಜನರಲ್ ಮೆರಿಟ್ ನಲ್ಲಿ ಸ್ಪರ್ಧೆ ಮಾಡುವುದು ಕ?್ಟಕರವಾಗಿದೆ.

ಕುಂಚಿಟಿಗರಿಗೆ ಒಬಿಸಿ ಮೀಸಲಾತಿ ಇಲ್ಲದೆ, ನವೋದಯ ಶಾಲೆಯಲ್ಲಿ ಸಿಗುವ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಜೆಇ ನೀಟ್ ಮೂಲಕ ಹೊರರಾಜ್ಯದ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣ ಪಡೆಯಲು ಆಗುತ್ತಿಲ್ಲ. ಅತಿ ಹೆಚ್ಚು ಸರ್ಕಾರಿ ನೌಕರಿಗಳು ದೊರೆಯುವ ರೈಲ್ವೆ, ಅಂಚೆ, ಬ್ಯಾಂಕಿಂಗ್, ಮಿಲಿಟರಿ, ಸ್ಟಾಫ್ ಸೆಲೆಕ್ಷನ್ ಕಮಿ?ನ್ ಭರ್ತಿ ಮಾಡುವ ಕೇಂದ್ರ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಯುಪಿಎಸ್ಸಿ ಮೂಲಕ ಭರ್ತಿ ಮಾಡುವ ಉನ್ನತ ಹುದ್ದೆಗಳು ಕೈತಪ್ಪಿ ಹೋಗುತ್ತಿವೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗ ವಂಚಿತರಾಗಿದ್ದೇವೆ. ಕುಂಚಿಟಿಗರಿಗೆ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದಾಗಿ ಒಬಿಸಿ ಮೀಸಲಾತಿ ಕಗ್ಗಂಟಾಗಿ ಉಳಿದಿದೆ. ಕುಂಚಿಟಿಗರು ಒಡೆದು ಆಳುವ ತಂತ್ರಕ್ಕೆ ಬಲಿಯಾಗಿ ಅತಂತ್ರ ಸ್ಥಿತಿ ತಲುಪಿದ್ದೇವೆ. ಮೀಸಲಾತಿ ಇಲ್ಲದ ಶೈಕ್ಷಣಿಕ, ಔದ್ಯೋಗಿಕ ಸಾಮಾಜಿಕ, ಆರ್ಥಿಕ ಹಿನ್ನಡೆಯಾಗಿದೆ. ಮೀಸಲಾತಿ ಕೊಡಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.


ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಪಾಂಡುರಂಗ, ತಿಮ್ಮೇಗೌಡ, ಅಶೋಕ್, ಗೋವಿಂದೇಗೌಡ, ಹರೀಶ್, ದಿನೇಶ್, ಕಿರಣ್, ಚಂದ್ರಶೇಖರ್, ಕೃಷ್ಣೇಗೌಡ, ರಾಜೇಗೌಡ, ವಿಷ್ಣು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net