ಕೀಳರಿಮೆ ಬಿಟ್ಟು ಆತ್ಮವಿಶ್ವಾಸ ಬೆಳೆಸಿಕೊಳ್ಳಿ

33
Published on

ಮೈಸೂರು:ವಿದ್ಯಾರ್ಥಿನಿಯರು ಕೀಳರಿಮೆ ಬಿಟ್ಟು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಯಶಸ್ಸು ಸಿಗಲಿದೆ ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕಿ ಡಾ.ಬಿ.ಎಸ್.ದಿವ್ಯಾ ಹೇಳಿದರು.
ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ಜೀವನ ಕೌಶಲ ತರಬೇತಿ ಸಮಿತಿ, ಯೂತ್ ರೆಡ್‌ಕ್ರಾಸ್ ಮತ್ತು ಐ.ಕ್ಯೂ.ಎ.ಸಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವುದು ಹೇಗೆ?’ ವಿಷಯ ಕುರಿತು ಉಪನ್ಯಾಸ ನೀಡಿದರು.
ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವುದು ಎಂದರೆ ಆತ್ಮಾವಲೋಕನ, ವೈಯಕ್ತಿಕ ಬೆಳವಣಿಗೆ, ಉತ್ತಮ ಹಾಗೂ ಉತ್ಪಾದಕ ಅಭ್ಯಾಸಗಳನ್ನು ಒಳಗೊಂಡಿರುವ ಜೀವನಪರ್ಯಂತ ಪ್ರಯಾಣವಾಗಿದೆ. ವಾಸ್ತವಿಕ ಗುರಿಗಳನ್ನು ಹೊಂದಿ ನಿಮ್ಮ ಸಾಧನೆಗಳೊಂದಿಗೆ ವಿಜೃಂಭಿಸುವುದು, ವೈಫಲ್ಯಗಳನ್ನು ಗುರುತಿಸಿ ಕಲಿಕೆಯ ಅನುಭವವಾಗಿ ಅವುಗಳನ್ನು ಸ್ವೀಕರಿಸುವುದು, ಸ್ವಯಂ ರಕ್ಷಣೆ ಅಭ್ಯಾಸ ಮಾಡುವುದು ಹಾಗೂ ಸಕಾರಾತ್ಮಕ ಪ್ರಭಾವಗಳೊಂದಿಗೆ ಬದುಕನ್ನು ಎದುರಿಸುವುದು ಎಂದು ನುಡಿದರು.
ಪ್ರಾಂಶುಪಾಲ ಡಾ.ಡಿ.ರವಿ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾ ನಿಯಂತ್ರಕ ಡಾ. ಶಿವಲಿಂಗಯ್ಯ, ಐ.ಕ್ಯೂ.ಎ.ಸಿ ಸಂಚಾಲಕ ನಂದಕುಮಾರ್, ಜೀವನ ಕೌಶಲ ತರಬೇತಿ ಸಂಚಾಲಕಿ ಡಾ.ಆರ್.ಟಿ.ರಾಧಿಕಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net