ಕೀರ್ತನೆಯಿಂದ ಸಮಾಜ ಪರಿವರ್ತನೆ

18rajesh7
Published on

ಚಾಮರಾಜನಗರ: ಕನಕದಾಸರ ಕೀರ್ತನೆಗಳಿಂದ ಸಮಾಜ ಪರಿವರ್ತನೆ ಸಾಧ್ಯವಾಗಿದೆ ಎಂದು ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಫ್ರಂಟ್ ಉಪಾಧ್ಯಕ್ಷ ರಂಗಪ್ಪ ಹೇಳಿದರು.

ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ಅಡಗಿದ್ದ ಜಾತಿ ಶ್ರೇಷ್ಠತೆ ರೂಪದ ಅಂಧಕಾರವನ್ನು ತೊಲಗಿಸುವಲ್ಲಿ ಹೆಚ್ಚು ಕಾಳಜಿಯಿಂದ ಶ್ರಮಿಸಿದ ಕನಕದಾಸರ ಆದರ್ಶಗಳು ನಮಗೆ ಮಾದರಿ ಆಗಬೇಕಿದೆ ಎಂದರು.

ಸಂಘಟನೆ ಜಿಲ್ಲಾಧ್ಯಕ್ಷ ಎಸ್.ಎಂ.ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಮಂಜು, ಸಿ.ಸಂತೋಷ್‌ಕುಮಾರ್, ಎಸ್.ಮಹೇಂದ್ರ, ಹರೀಶ್, ಸಂಘಟನಾ ಕಾರ್ಯದರ್ಶಿ ಎಸ್.ಎನ್.ಮಂಜು ಹಾಗೂ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net