

ಮೂಡಲಗಿ: ತಾಲೂಕಿನ ಕಲ್ಲೋಳಿ,ಲಕ್ಷೆ$್ಮಶ್ವರ ಗ್ರಾಮ ಸೇರಿ ವಿವಿಧ ಗ್ರಾಮಗಳಲ್ಲಿ ವಿಜ್ಞಾನಿಗಳನ್ನೊಳಗೊಂಡ ಕೀಡೆ ಸರ್ವೇಣಾ ತಂಡ ಭೇಟಿ ನೀಡಿ ವಿವಿಧ ಬೆಳೆಗಳನ್ನು ಸೋಮವಾರ ವೀಣೆ ಮಾಡಿತು.
ತಂಡದ ತಾಲೂಕಿನ ಸಹಾಯಕ ಕಷಿ ನಿರ್ದೇಶಕ ಎಂ.ಎಂ.ನದಾಫ್, ಬೆಳಗಾವಿ ಜಂಟಿ ಕಷಿ ನಿರ್ದೇಶಕ ಕಾರ್ಯಾಲಯದ ಸಹಾಯಕ ಕಷಿ ನಿರ್ದೇಶಕ ಸಿ.ಐ.ಹೂಗಾರ ಹಾಗೂ ತುಕ್ಕಾನಟ್ಟಿ ಕೆವಿಕೆಯ ವಿಜ್ಞಾನಿ ಡಾ.ಧನಂಜಯ ಚೌಗಲಾ ಅವರು ಕಬ್ಬು ಸೇರಿ ವಿವಿಧ ಬೆಳೆಗಳನ್ನು ವೀಸಿದರು. ಪ್ರಮುಖವಾಗಿ ಕಬ್ಬು ಬೆಳೆಗೆ ಬಾಧಿಸುತ್ತಿರುವ ಗೊಣ್ಣೆಹುಳು ನಿರ್ವಹಣೆಗೆ ಸಮಗ್ರ ನಿರ್ವಹಣೆಗೆ ಪದ್ಧತಿ ಅಳವಡಿಸಲು ರೆತರಿಗೆ ಸಲಹೆ ನೀಡಿದ್ದಾರೆ. ಮೆಟರೆಸಿಯಂ 5&10 ಕೆಜಿ 500 ಕೆಜಿ ಸಗಣಿ ಗೊಬ್ಬರದಲ್ಲಿ ಬೆರೆಸಿ ಹಾಕುವುದು. ೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಲೆಟ್ ಟ್ರ್ಯಾಪ್ ಮೂಲಕ ಗೊಣ್ಣೆ ಹುಳುವಿನ ತಾಯಿ ಕೀಟವನ್ನು ನಾಶಪಡಿಸುವುದು ಹಾಗೂ ಪಿಪ್ರೋನಿಲ್ ಹರಳು 5&6 ಕೆಜಿ ಪ್ರತಿ ಎಕರೆಗೆ ಹಾಕುವುದು. ಕೊನೆಗೆ ಕ್ಲೋರೋೆರಿಪಾಸ್ 10 ಮಿ.ಲಿ. ಪ್ರತಿ ಲೀಟರಿಗೆ ಬೆರೆಸಿ ಸಿಂಪಡಿಸುವುದು. ಹೀಗೆ ಮಾಡಿ ಗೊಣ್ಣೆ ಹುಳು ನಿರ್ವಹಿಸಲು ಸೂಚಿಸಿದರು. ಸೋಯಾಬೀನ್ ಬೆಳೆಯಲ್ಲಿ ಕಾಯಿ ಹಂತದಲ್ಲಿದ್ದು, ನೀರಿನಲ್ಲಿ ಕರಗುವ 13: 0 :45 ರಸಗೊಬ್ಬರವನ್ನು 100 ಗ್ರಾಂ ಪ್ರತಿ ಪಂಪಿಗೆ ಹಾಕಿ ಸಿಂಪಡಿಸಲು ಸೂಚಿಸಿದರು. ರೋಗಗಳಾದ ಕುಂಕುಮ ರೋಗ ನಿರ್ವಹಿಸಲು 16 ಮಿಲಿ ಪ್ರತಿ ಪಂಪಿಗೆ ಹಾಕಿ ಸಿಂಪಡಿಸಲು ಸೂಚಿಸಿದರು. ಕಷಿ ಸಂಜೀವಿನಿಯ ಸಿಬ್ಬಂದಿ ಇತರರು ಇದ್ದರು.