

ಚಿತ್ರದುರ್ಗ: ಕೀಟಜನ್ಯರೋಗಗಳ ನಿರ್ಲಕ್ಷ್ಯಬೇಡವೆಂದು ಡಿಎಚ್‌ಒ ಡಾ.ಕೆ.ರಂಗನಾಥ್ ಹೇಳಿದರು. ನಗರದ ಡಯಟ್‌ನಲ್ಲಿ ಸೋಮವಾರ ಚಿತ್ರ ದುರ್ಗ ತಾಲೂಕಿನ ವಿವಿಧ ಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಏರ್ಪಡಿಸಿದ್ದ ಕೀಟಜನ್ಯ ರೋಗಗಳ ನಿಯಂತ್ರಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು,ಕೀಟಜನ್ಯ ರೋಗಳೆಡೆ ಸಮುದಾಯದ ಸಹಭಾಗಿತ್ವದೊಂದಿಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕೆಂದರು. ಈ ವೇಳೆ ಕೀ ಟಜನ್ಯ ರೋಗಳ ಕುರಿತು ಜಾಗೃತಿ ಮೂಡಿಸುವ ಕರಪತ್ರಗಳನ್ನು ಬಿಡುಗಡೆ ಮಾಡಿದರು.
ಜಿಲ್ಲಾಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಶಿ ಮಾತನಾಡಿ,ಕೀಟಗಳಿಂದ ಹರಡುವ ರೋಗಗಳಾದ ಮಲೇರಿಯಾ, ಡೆಂೇ, ಚಿಕೂನ್ ಗುನ್ಯಾ,ಆನೆಕಾಲು ರೋಗ,ಮೆದುಳು ಜ್ವರ ಹರಡುವ ಬಗೆ ಹಾಗೂ ನಿಯಂತ್ರಣ ಕ್ರಮಗಳ ಕುರಿತು ವಿವರಿಸಿದರು. ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ಎಚ್‌ಎಸ್‌ಟಿ ಸ್ವಾಮಿ,ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್,ಡಯಟ್ ಉಪ ನಿರ್ದೇಶಕ ನಾಸಿರುದ್ದೀನ್ ಮಾತನಾಡಿದರು.
ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್,ಡಯಟ್ ಉಪನ್ಯಾಸಕ ನಿತ್ಯಾನಂದ,ಆರೋಗ್ಯ ಮೇಲ್ವಿಚಾರಣಾಧಿಕಾರಿಗಳಾದ ಮಳಲಿ ಶ್ರೀನಿವಾಸ್,ಮಲ್ಲಿಕಾರ್ಜುನ್,ನಾಗರಾಜ್,ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮತ್ತಿತರರು ಇದ್ದರು.