ಕೀಟಜನ್ಯ ರೋಗಗಳಿಗೆ ಕಡಿವಾಣ ಹಾಕಿ

CTD CEO-------
Published on

ಚಿತ್ರದುರ್ಗ: ಸೊಳ್ಳೆಗಳ ಉತ್ಪತ್ತಿ,ಅವುಗಳ ಕಡಿತದಿಂದ ಆಗುವ ದುಷ್ಪಾರಿಣಾಮ,ಸೊಳ್ಳೆ ನಿಯಂತ್ರಣ ಕುರಿತು ವಹಿಸಬೇಕಾದ ಮುಂಜಾಗ್ರತೆ ಕು ರಿತು ಸಾರ್ವಜನಿಕರಲ್ಲಿ ಸೂಕ್ತ ಜಾಗೃತಿ ಮೂಡಿಸುವ ಮೂಲಕ ಕೀಟಜನ್ಯ ರೋಗಗಳಿಗೆ ಕಡಿವಾಣ ಹಾಕಬೇಕೆಂದು ಜಿಪಂ ಸಿಇಒ ಎಸ್. ಜೆ.ಸೋಮಶೇಖರ್ ಹೇಳಿದರು.
ಜಿಲ್ಲಾಡಳಿತ,ಜಿಪಂ,ಆರೋಗ್ಯ ಇಲಾಖೆಯಿಂದ ಏರ್ಪಡಿಸಿದ್ದ ಕೀಟಜನ್ಯ ರೋಗಗಳ ವಿರುದ್ಧದ ಜಾಗೃತಿ ಜಾಥಾ ಹಾಗೂ ಲಾರ್ವಾ ಸಮೀಕ್ಷೆ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಡೆಂೆ ಪ್ರಕರಣಗಳು ಹೆಚ್ಚಾಗಿದೆ.
ರೋಗ ಬಂದ ಮೇಲೆ ಪಶ್ಚಾತ್ತಾಪ ಪಡುವುದಕ್ಕಿಂತ ರೋಗ ಬಾರದೆ ಇರುವ ಹಾಗೆ ನೋಡಿಕೊಳ್ಳುವುದು ಸರ್ವರ ಜವಾಬ್ದಾರಿಯಾಗಿ ದೆ. ಆರೋಗ್ಯ ಇಲಾಖೆ ಅಧಿಕಾರಿ,ಸಿಬ್ಬಂದಿ ಪ್ರತಿ ಶುಕ್ರವಾರ ಗುಣಾತ್ಮಕವಾದ ಸಮೀಕ್ಷೆ ನಡೆಸಿ ರೋಗ ಹರಡದಂತೆ ಶ್ರಮಿಸಬೇಕು ಎಂ ದು ಹೇಳಿದರು.
ಮಳೆಗಾಲ ಪ್ರಾರಂಭದ ಹಿನ್ನಲೆಯಲ್ಲಿ ಪ್ರತಿ ಶುಕ್ರವಾರದ ಜತೆಗೆ ಪ್ರತಿ ಮಂಗಳವಾರವೂ ಸಮೀಕ್ಷೆ ನಡೆಸಬೇಕೆಂದು ಸೂಚಿಸಿದ ಅವ ರು,ಡೆಂೆ ನಿಯಂತ್ರಣಕ್ಕೆ ನಾವೆಲ್ಲರೂ ತಂಡವಾಗಿ ಕಾರ್ಯನಿರ್ವಹಿಸೋಣವೆಂದರು. ಬುದ್ಧ ನಗರದ ಪ್ರದೇಶದ ಕೆಲವು ಮನೆಗಳಿಗೆ ಖುದ್ದು ಭೇಟಿ ನೀಡಿದ ಸೋಮಶೇಖರ್ ಅವರು ಸೊಳ್ಳೆ ಉತ್ಪತ್ತಿ ತಾಣಗಳ ಪರಿಶೀಲನೆ ಮಾಡಿದರು.
ಡಿಎಚ್‌ಒ ಡಾ.ಜಿ.ಪಿ.ರೇಣು ಪ್ರಸಾದ್ ಮಾತನಾಡಿ,ಜಿಲ್ಲೆಯಲ್ಲಿ ಈ ವರ್ಷ 2024ರ ಜನವರಿಯಿಂದ ಇಲ್ಲಿಯವರೆಗೆ 265 ಡೆಂೆ ಪ್ರಕರಣ ಗಳು ವರದಿಯಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರತಿ ಶುಕ್ರವಾರ ಆಶಾ ಕಾರ್ಯಕರ್ತೆಯರು,ಆರೋಗ್ಯ ಇಲಾಖೆ ಸಿ ಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಈಡೀಸ್ ಸೊಳ್ಳೆ ಲಾ ರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಚಟುವಟಿಕೆಗಳಲ್ಲಿ ಪಾಲ್ಗೊಂ ಡು,ಕೀಟಜನ್ಯ ರೋಗಗಳಿಂದ ಸಾವು ನೋವು ಸಂಭವಿಸದಂತೆ ಮುಂಜಾಗ್ರತೆ ವಹಿಸ ಬೇಕೆಂದರು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಶಿ,ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್,ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್,ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಸುಧಾ, ಕುಟುಂಬ ಕಲ್ಯಾ ಣಾಧಿಕಾರಿ ಡಾ.ರೇಖಾ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ತಾಪಂ ಇಒ ಹನುಮಂತಪ್ಪ,ಉಪ ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಜೆ.ಆರ್.ಗೌರಮ್ಮ,ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ,ಬಿ ಜಾನಕಿ. ಆರೋಗ್ಯ ಮೇಲ್ವಿಚಾರಣಾಧಿಕಾರಿ ಸುರೇಶ,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗುರುಮೂರ್ತಿ,ಮಲ್ಲಿಕಾರ್ಜುನ್,ಶ್ರೀಧರ್,ನಾಗರಾಜ್ ಇತರರು ಇದ್ದರು.
(ಸಿಟಿಡಿ 5 ಲಾರ್ವ ಸಿಇಒ)
ಚಿತ್ರದುರ್ಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೀಟಜನ್ಯ ರೋಗಗಳ ವಿರುದ್ಧದ ಜಾಗೃತಿ ಜಾಥಾವನ್ನು ಜಿಪಂ ಸಿಇಒ ಎಸ್.ಜೆ.ಸೋಮ ಶೇಖರ್ ಉದ್ಘಾಟಿಸಿದರು. ಡಿಎಸ್‌ಒ ಡಾ.ಜೆ.ಪಿ.ರೇಣುಪ್ರಸಾದ್,ಡಾ.ಚಂದ್ರಶೇಖರ್ ಕಂಬಾಳಿಮಠ್,ಡಾ.ಸುಧಾ, ಡಾ.ರೇಖಾ, ಡಾ.ಬಿ.ವಿ.ಗಿರೀಶ್,ಡಾ.ಎನ್.ಕಾಶಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net