ಕಿಷ್ಕಿಂಧ ಜಿಲ್ಲೆಗೆ ಕಂಪ್ಲಿ ಸೇರ್ಪಡೆಗೆ ತಾಂತ್ರಿಕ ಅಂಶ ಪರಿಶೀಲಿಸಿ

Untitled design
ಕಂಪ್ಲಿಯ ಸತ್ಯನಾರಾಯಣ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಕಿಷ್ಕಿಂಧ ಜಿಲ್ಲಾ ಹೋರಾಟ ಸಮಿತಿ ಸಭೆಯಲ್ಲಿ ಹೋರಾಟ ಸಮಿತಿ ಸದಸ್ಯ ಸಂತೋಷ್ ಕೆಲೋಜಿ ಮಾತನಾಡಿದರು. ಪ್ರಮುಖರಾದ ಎಂ.ಸುಧೀರ್, ಎಸ್.ಎಂ.ನಾಗರಾಜ, ಪಿ.ಬ್ರಹ್ಮಯ್ಯ, ಜಿ.ವಿ.ಸತ್ಯನಾರಾಯಣಬಾಬು, ಸುರೇಶ್ ಸಿಂಗನಾಳ್ ಇತರರಿದ್ದಾರೆ.
Published on

ಕಂಪ್ಲಿ:ವಿಜಯನಗರ ಜಿಲ್ಲೆ ರಚನೆಗಾಗಿ ಹೋರಾಟ ಸಂದರ್ಭದಲ್ಲಿ ಕಂಪ್ಲಿ ತಾಲೂಕಿನ ಜನರನ್ನು ಬಳಸಿಕೊಂಡು ಜಿಲ್ಲೆಯಾದ ನಂತರ ಕಂಪ್ಲಿ ತಾಲೂಕನ್ನು ಕೈಬಿಟ್ಟಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಿ. ಸಿದ್ದಪ್ಪ ಹೇಳಿದರು.


ಪಟ್ಟಣದ ಸತ್ಯನಾರಾಯಣ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಕಿಷ್ಕಿಂಧ ಜಿಲ್ಲಾ ಹೋರಾಟ ಸಭೆಯಲ್ಲಿ ಮಾತನಾಡಿದರು.
ಗಂಗಾವತಿಯ ತಾಲೂಕನ್ನು ಕಿಷ್ಕಿಂಧ ಜಿಲ್ಲೆಗೆ ಸೇರಿಸಲು ಉತ್ಸಾಹ ಇದೆ. ಕಂಪ್ಲಿ ತಾಲೂಕು ಕಿಷ್ಕಿಂಧ ಜಿಲ್ಲೆಗೆ ಒಳಗೊಳ್ಳಲು ಗಡಿ ಅಡ್ಡಿಯಾಗಲಿದೆಯೇ?.

ಕಂಪ್ಲಿ ಮತ್ತು ಕುರುಗೋಡು ತಾಲೂಕು ಕೇಂದ್ರಗಳಾಗಿದ್ದು, ಕಂಪ್ಲಿ ತಾಲೂಕನ್ನು ಮಾತ್ರ ಕಿಷ್ಕಿಂಧ ಜಿಲ್ಲೆಗೆ ಸೇರ್ಪಡೆಗೊಳಿಸಲು ಬರುತ್ತದೆಯೇ?. ತಾಂತ್ರಿಕ ಅಂಶಗಳು ಕಂಪ್ಲಿ ತಾಲೂಕನ್ನು ಕಿಷ್ಕಿಂಧ ಜಿಲ್ಲೆಗೆ ಸೇರ್ಪಡೆಗೊಳಿಸಲು ಅಡ್ಡಿಯಾಗುವುದೇ ಎಂಬುದನ್ನು ಹೋರಾಟ ಸಮಿತಿ ಚರ್ಚಿಸಿ ನಮಗೆ ತಿಳಿದರೆ ಮಾತ್ರ ನಾವು ಬೆಂಬಲಿಸುತ್ತೇವೆ ಎಂದರು.


ಹೋರಾಟ ಸಮಿತಿ ಸದಸ್ಯ ಸಂತೋಷ್ ಕೇಲೋಜಿ ಮಾತನಾಡಿ, ಜನಾಭಿಪ್ರಾಯ ಬಲವಾಗಿದ್ದರೆ ತಾಂತ್ರಿಕ ಅಂಶಗಳು ಅಡ್ಡಿಯಾಗುವುದಿಲ್ಲ. ತಾಂತ್ರಿಕ ಅಂಶಗಳು ಅಡ್ಡಿಯಾದರೂ ಪ್ರತ್ಯೇಕ ತಾಲೂಕುಗಳಾದ ಉದಾಹರಣೆಗಳಿವೆ. ಆದರೂ ಈ ಕುರಿತು ಮಾಹಿತಿ ಸಂಗ್ರಹಿಸಲಾಗುವುದು ಎಂದರು.


ಪ್ರಮುಖರಾದ ಅರವಿ ಬಸವನಗೌಡ, ಕ.ಮ.ಹೇಮಯ್ಯಸ್ವಾಮಿ, ಎಂ.ಸುಧೀರ್, ಪಿ.ಬ್ರಹ್ಮಯ್ಯ, ಸಿ.ಆರ್.ಹನುಮಂತ, ಎಸ್.ಎಂ.ನಾಗರಾಜ, ಜಿ.ಪ್ರಕಾಶ್, ಷಣ್ಮುಖಪ್ಪ ಚಿತ್ರಗಾರ್, ಬಿ.ಅಂಬಣ್ಣ, ಎನ್.ಪುರುಷೋತ್ತಮ, ಬಿ.ದೇವೇಂದ್ರ, ಜಿ.ವಿ.ಸತ್ಯನಾರಾಯಣಬಾಬು, ಎಸ್.ಚಂದ್ರಶೇಖರಗೌಡ,

ಜಿ.ಬಿ.ಕೋಟೇಶ್ವರ, ಹಾದಿಮನಿ ಕಾಳಿಂಗವರ್ಧನ, ಕಿಷ್ಕಿಂಧ ಜಿಲ್ಲಾ ಹೋರಾಟ ಸಮಿತಿ ಸದಸ್ಯರಾದ ಸುರೇಶ್ ಸಿಂಗನಾಳ್, ಸಂತೋಷ್ ಕೆಲೋಜಿ, ಮಂಜುನಾಥ ಕಟ್ಟಿಮನಿ, ಯೋಗೇಶ್ ಮೋತಾ, ಚನ್ನಬಸಯ್ಯತಾತ, ವಕೀಲ ಎಚ್.ಎಂ.ಎಸ್.ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net