ಕಿಲಾರಿ ತಳಿ ರಾಸುಗಳ ಬಹಿರಂಗ ಹರಾಜು

22BNK01
Published on

ಬಂಕಾಪುರ: ಪಟ್ಟಣದ ಕಿಲಾರಿ ಗೋ ಸಂವರ್ಧನಾ ಕೇಂದ್ರದಲ್ಲಿ ಕಿಲಾರಿ ತಳಿ ರಾಸುಗಳ ಬಹಿರಂಗ ಹರಾಜು ಪ್ರಕ್ರಿಯೆ ಶನಿವಾರ ನಡೆಯಿತು.

ಕೇಂದ್ರದ ಆವರಣದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 33 ಗೋವುಗಳು 9 ಹೋರಿಗಳು ಸೇರಿ ಒಟ್ಟು 42 ಕಿಲಾರಿ ತಳಿ ರಾಸುಗಳನ್ನು ಲಿಲಾವು ಮಾಡಲಾಯಿತು. ಹರಾಜಿನಲ್ಲಿ ಧಾರವಾಡ, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಹಾವೇರಿ, ಗದಗ ಸೇರಿ ಬೇರೆ ಬೇರೆ ಜಿಲ್ಲೆಗಳ ಒಟ್ಟು 74 ಜನರು ಪಾಲ್ಗೊಂಡಿದ್ದರು. ಒಟ್ಟು 42 ರಾಸುಗಳ ಹರಾಜಿನಿಂದ 9,17,500 ರೂ. ಬಂದಿರುವುದಾಗಿ ಕಿಲಾರಿ ಗೋ ಸಂವರ್ಧನಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಧಾರವಾಡ ವಲಯ ಜಂಟಿ ನಿರ್ದೇಶಕ ಡಾ. ಜೆ. ಪಂಪಾಪತಿ, ಉಪ ನಿರ್ದೇಶಕ ಡಾ. ಬಿ.ಎ. ಮುಲ್ಕಿಪಾಟೀಲ, ಪಶು ವೈದ್ಯಾಧಿಕಾರಿ ಬಸವರಾಜ ಹಿರೇಮಠ, ಪಶು ಪರೀಕ್ಷಕರಾದ ಬಿ.ಎಚ್. ಬ್ಯಾಡಗಿ, ಜ್ಯೋತಿ ಹಿರೇಮಠ, ಕೃಷ್ಣ ನಾಯಕ, ಮೋಹನ ಜಾಡಗೊಪ್ಪದ ಹಾಗೂ ಹೊರಗುತ್ತಿಗೆ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net