ಕಿರುಕುಳ ಕೊಟ್ಟರೆ ಜೈಲು ಗ್ಯಾರಂಟಿ

ctd-----ig
Published on

ಚಿತ್ರದುರ್ಗ: ಸಾಲ ವಸೂಲಿಗೆ ಕಿರುಕುಳ ನೀಡುವಂಥ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅಧಿಕಾರಿ, ಮಾಲೀಕರನ್ನು ಬಂಧಿಸಲಾಗುವುದು ಎಂದು ದಾವಣಗೆರೆ ಪೂರ್ವ ವಲಯ ಐಜಿಪಿ ಬಿ.ಆರ್. ರವಿಕಾಂತೇಗೌಡ ಎಚ್ಚರಿಕೆ ನೀಡಿದರು.

ಪೂರ್ವ ವಲಯ ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಚಿತ್ರದುರ್ಗ ಡಿಪಿಒಕ್ಕೆ ಗುರುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಣಕಾಸು ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಸಾಲಗಾರರಿಗೆ ಕಿರುಕುಳ ನೀಡುವ ರೌಡಿಶೀಟರ್ಸ್, ಬಡ್ಡಿಂಗ್ ರೌಡಿಗಳ ವಿರುದ್ಧ ಕಾನೂನು ರಿತ್ಯಾ ಕ್ರಮ ಜರುಗಿಸಿ ಗಡಿಪಾರು ಮಾಡಲಾಗುವುದು ಎಂದರು.

ರೌಡಿ ಶೀಟರ್ಸ್ ಪೊಲೀಸರ ನಿಗಾದಲ್ಲಿರುತ್ತಾರೆ. ಆದರೆ, ಬಡ್ಡಿಂಗ್ ರೌಡಿಗಳು ಪೊಲೀಸರ ಗಮನದಲ್ಲಿ ಇರುವುದಿಲ್ಲ. ಆದ್ದರಿಂದ ಈ ಎಲ್ಲರ ಮೇಲೂ ನಿಗಾ ವಹಿಸಲು ವಲಯ ವ್ಯಾಪ್ತಿಯ ಎಸ್‌ಪಿಗಳಿಗೆ ಸೂಚಿಸಲಾಗುವುದು. ಹಣಕ್ಕಾಗಿ ಕಂಪನಿಗಳೊಂದಿಗೆ ಸಾಲಗಾರರಿಗೆ ಕಿರುಕುಳಕ್ಕೆ ಮುಂದಾಗಬಾರದು ಎಂದು ರೌಡಿಗಳಿಗೆ ಎಚ್ಚರಿಕೆ ನೀಡಿದರು.

ಬಲವಂತದ ಸಾಲ ವಸೂಲಿಗೆ ಮುಂದಾದರೆ ಕೂಡಲೇ 112,ತಮಗೆ,ಎಸ್‌ಪಿ ಹಾಗೂ ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸುವಂ ತೆ ಸಾರ್ವಜನಿಕರಿಗೆ ಮನವಿ ಮಾಡಿದ ಐಜಿಪಿ,ಮಾಹಿತಿ ತಿಳಿದೂ ನಿರ್ಲಕ್ಷೃವಹಿಸುವ ಪೊಲೀಸರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಹೇಳಿದರು.

ರಸ್ತೆ ಅಪಘಾತಗಳು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತವೆ. ದುಡಿಯುವವರನ್ನು ಕಳೆದುಕೊಂಡು ಅವರ ಕುಟುಂಬಗಳು ಸಂ ಕಷ್ಟಕ್ಕೆ ಸಿಲುಕುತ್ತವೆ. ಬ್ಲಾಕ್‌ಸ್ಪಾಟ್‌ಗಳನ್ನು ದುರಸ್ತಿಗೊಳಿಸಬೇಕು. ಇಟ್ಞಠ್ಟಿಜಿಚ್ಠಿಠಿಟ್ಟ ್ಞಛಿಜ್ಝಜಿಜಛ್ಞ್ಚಿಛಿ ಸಲ್ಲದು. ಈ ನಿಟ್ಟಿನಲ್ಲಿ ರಾ.ಹೆ.ಪ್ರಾಧಿಕಾರವೂ ಗಂಭೀರವಾಗಿ ಗಮನ ಹರಿಸಬೇಕು ಎಂದರು.

ಎಂದೆಂದಿಗೂ ನಿಮ್ಮೊಂದಿಗೆ

ಜನಸ್ನೇಹಿ ಪೊಲೀಸ್ ವ್ಯವಸ್ಥೆ ಆದ್ಯತೆಯಾಗಿದ್ದು,‘ಎಂದೆಂದಿಗೂ ನಾವು ನಿಮ್ಮೊಂದಿಗೆ ’ಎಂಬ ಇಲಾಖೆ ಘೋಷಣೆಯಂತೆ ಕಾನೂನು ಸುವ್ಯವಸ್ಥೆ ಸಮರ್ಪಕ ನಿರ್ವಹಣೆ, ಅಕ್ರಮ ಚಟುವಟಿಕೆಗಳು, ಅಪರಾಧ ಕೃತ್ಯಗಳನ್ನು ನಿಯಂತ್ರಿಸಲಾಗುವುದು ಎಂದರು.

ಮಾದಕ ವಸ್ತು ನಿಯಂತ್ರಣ

ಗಾಂಜಾ,ಸಿಂಥಟಿಕ್ ಡ್ರಗ್ಸ್ ಇತ್ಯಾದಿ ಸಾಗಾಣಿಕೆ,ಮಾರಾಟ,ಸೇವನೆ ಇತ್ಯಾದಿಗಳನ್ನು ಸಹಿಸಲಾಗುವುದು. ಡಗ್ಸ್ ಮಾಫಿಯಾವನ್ನು ಸಂ ಪೂರ್ಣವಾಗಿ ನಿಯಂತ್ರಿಸುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇಲಾಖೆಗೆ ಸವಾಲಾಗುತ್ತಿರುವ ಸೈಬರ್ ಅಪರಾಧಗಳ ಕೃತ್ಯಗಳಿಗೂ ಕಡಿವಾಣ ಹಾಕಲಾಗುವುದು. ಹಣ ಕಳೆದುಕೊಂಡವರು ತಕ್ಷಣ ಮಾ ಹಿತಿ ನೀಡಿದರೆ ಹಣವನ್ನು ರಕ್ಷಿಸಿ,ಅಪರಾಧಿಗಳನ್ನೂ ಪತ್ತೆ ಮಾಡಬಹುದಾಗಿದೆ ಎಂದರು.

ಐಜಿಪಿ ಅವರನ್ನು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಸ್ವಾಗತಿಸಿದರು. ಡಿಎಆರ್ ಡಿಎಸ್‌ಪಿ ಗಣೇಶ್ ನೇತೃತ್ವದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ,ಡಿವೈಸ್ಪಿಗಳಾದ ಪಿ.ಕೆ.ದಿನಕರ್,ರಾಜಣ್ಣ,ಶಿವಕುಮಾರ್,ಉಮೇಶ್‌ನಾಯ್ಕ ಮತ್ತಿತ ರ ಹಿರಿಯ ಅಧಿಕಾರಿಗಳಿದ್ದರು.

ದುರ್ಗ ಹೆಮ್ಮೆಯ ಜಿಲ್ಲೆ

ಐತಿಹಾಸಿಕ ಜಿಲ್ಲೆ ಚಿತ್ರದುರ್ಗ ತಮ್ಮ ವಲಯ ವ್ಯಾಪ್ತಿಯಲ್ಲಿರುವುದು ವೈಯಕ್ತಿಕವಾಗಿ ತಮಗೆ ಹೆಮ್ಮೆ ಎನಿಸುತ್ತದೆ ಎಂದು ರವಿಕಾಂತೇ ಗೌಡ ಹೇಳಿದರು. ಚಿತ್ರದುರ್ಗ ಇತಿಹಾಸ, ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಸಮೃದ್ಧಿಯಿಂದ ಕೂಡಿರುವ ಜಿಲ್ಲೆ. ರಾಜ್ಯ, ಹೊರ ರಾಜ್ಯದಲ್ಲೂ ಗುರುತಿಸುವಂಥ ಐತಿಹ್ಯ ಹಿನ್ನೆಲೆ ಚಿತ್ರದುರ್ಗಕ್ಕೆ ಇದೆ ಎಂದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net