

ಚಾಮರಾಜನಗರ: ಜಿಲ್ಲೆಯಲ್ಲಿ ಹೃಯಾಘಾತದಿಂದ ದಿಢೀರ್ ಮೃತಪಡುತ್ತಿರುವ ಪ್ರಕರಣಗಳು, ಅದರಲ್ಲೂ ಕಡಿಮೆ ವಯಸ್ಸಿನವರ ಸಾವುಗಳು ಸಂಭವಿಸುತ್ತಿವೆ.
ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಗುಪ್ತಚಾರ ವಿಭಾಗದ ಕರ್ತವ್ಯನಿರತ ಪೇದೆ, ಮೂಲತಃ ರಾಯಚೂರು ಜಿಲ್ಲೆಯ ಲಿಂಗನಸೂರು ಪಟ್ಟಣದ ನಿವಾಸಿ ಪರಶುರಾಮ್ (34) ಹೃದಯಾಘಾತದಿಂದ ಶನಿವಾರ ಮೃತಪಟ್ಟರು. ಮಧ್ಯಾಹ್ನ 12 ಗಂಟೆಯಲ್ಲಿ ಠಾಣೆಯಲ್ಲಿ ಸಿಬ್ಬಂದಿಯೊಂದಿಗೆ ಮಾತನಾಡಿಕೊಂಡು ವಸತಿಗೃಹದ ಬಳಿ ತೆರಳಿದ್ದು, ಬೈಕ್ ಮೇಲೆ ಕುಳಿತಿರುವಾಗಲೇ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದರು.
ಮತ್ತೊಂದು ಘಟನೆಯಲ್ಲಿ ಯಳಂದೂರು ತಾಲೂಕಿನ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಪಾಲಕ ಫೈರೋಜ್ (35) ಹೃದಯಾಘಾತದಿಂದ ಭಾನುವಾರ ನಿಧನರಾದರು. ಕೊಳ್ಳೇಗಾಲದ ಅರಣ್ಯ ಇಲಾಖೆಯ ವಸತಿಗೃಹದಲ್ಲಿ ಹೃದಯಘಾತ ಸಂಭವಿಸಿ ಮೃತಪಟ್ಟರು.
ಈ ಎರಡು ಉದಾಹರಣೆಗಳು ಇತ್ತೀಚಿನ ದಿನಗಳಲ್ಲಿ ಹೃದಯಾಘಾತಗಳು ಗಣನೀಯವಾಗಿ ಹೆಚ್ಚಾಗುತ್ತಿರುವುದ್ದು, ಅದರಲ್ಲೂ ವಯಸ್ಕರೇ ಇದಕ್ಕೆ ಬಲಿಯಾಗುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇದೊಂದು ಜೀವನ ಶೈಲಿ ಆಧಾರಿತ ಕಾಯಿಲೆಯಾಗಿದೆ. ಇದಕ್ಕೆ ಮಧುಮೇಹ, ರಕ್ತದೊತ್ತಡ ಜೊತೆ ಸೇರಿಕೊಂಡಿರುವ ಅಸಾಂಕ್ರಾಮಿಕ ರೋಗಗಳಾಗಿವೆ.
ಎಷ್ಟು ಜನರಿಗೆ ಬಿಪಿ, ಶುಗರ್: ಜಿಲ್ಲೆಯಲ್ಲಿ ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಕಡಿಮೆ ಏನಿಲ್ಲ. ಜಿಲ್ಲಾ ಕಣ್ಗಾವಲು ಘಟಕ ನೀಡಿರುವ ಮಾಹಿತಿ ಪ್ರಕಾರ, 53379 ಜನರಿಗೆ ರಕ್ತದೊತ್ತಡ, 35889 ಜನರಿಗೆ ಮಧುಮೇಹ ಕಾಡುತ್ತಿದೆ. ಇವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮಧುಮೇಹ ಮತ್ತು ರಕ್ತದೊತ್ತಡ ಹೃದಯ ರೋಗಕ್ಕೆ ಪ್ರಮುಖ ಕಾರಣವಾಗಿವೆ. ಇವು ಜೀವನ ಶೈಲಿ ಆಧಾರಿತ ಕಾಯಿಲೆಗಳು. ಬಿಪಿ, ಶುಗರ್, ಹೃದಯ ರೋಗ, ಪಾರ್ಶ್ವವಾಯು, ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಕಾಡುತ್ತಿವೆ. ಯುವಕರಲ್ಲೇ ಅಧಿಕ ಪ್ರಮಾಣದಲ್ಲಿ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಹಿಂದೆ ಮಕ್ಕಳು ತಂದೆ-ತಾಯಂದಿರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದರೆ, ಈಗ ತಂದೆ-ತಾಯಂದಿರೇ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುವಂತಾಗಿದೆ. ಅಂದು ಚಿಕ್ಕ ವಯಸ್ಸಿನಲ್ಲಿ ಬಿಪಿ, ಶುಗರ್, ಹೃದಯ ರೋಗ ಕಾಣಿಸಿಕೊಳ್ಳುವುದು ಅಪರೂಪವಾಗಿತ್ತು. ಆದರೆ ಇಂದು ಪ್ರಮುಖ ಕಾಯಿಲೆಯಾಗಿ ಕಾಡುತ್ತಿವೆ.
ದಿಗ್ಭ್ರಮೆ ಮೂಡಿಸಿದ ಬಾಲಕಿ ಸಾವು:
ಚಾಮರಾಜನಗರದ ಸಂತ ್ರಾನ್ಸಿಸ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ಹೃದಯಾಘಾತದಿಂದ ಮೃತಪಟ್ಟ ಪ್ರಕರಣ ಗಡಿಜಿಲ್ಲೆ ಚಾಮರಾಜನಗರವನ್ನೇ ದಿಗ್ಭ್ರಮೆ ಮೂಡಿಸಿತು. ಇದೇ ವರ್ಷ ಜನವರಿನಲ್ಲಿ ಶಾಲೆಯಲ್ಲೇ ಬಾಲಕಿ ತೇಜಸ್ವಿನಿ ಅಸ್ವಸ್ಥಳಾಗಿ ಬಿದ್ದಳು. ಆಸ್ಪತ್ರೆಗೆ ಕರೆದುಕೊಂಡು ಹೋದ ಬಳಿಕ ಹೃದಯಾಘಾತದಿಂದ ಮೃತಪಟ್ಟಿರುವುದು ತಿಳಿದುಬಂದಿತು. ಬೇರೆ ಜಿಲ್ಲೆಗಳಲ್ಲೂ ಹೃದ್ರೋಗಕ್ಕೆ ಮಕ್ಕಳು ಬಲಿಯಾಗುತ್ತಿವೆ. ವೃದ್ಧರಂತೆ ಮಕ್ಕಳಲ್ಲೂ ಹೃದಯ ಕಾಯಿಲೆ ಕಾಡುತ್ತಿದೆ. ಕಣ್ಣೆದುರು ಬೆಳೆಯಬೇಕಾದ ಮಕ್ಕಳು ತಂದೆ-ತಾಯಿಯ ಮುಂದೆ ಸಾಯುತ್ತಿರುವುದು ಹೆತ್ತವರ ಕರುಳನ್ನು ಹಿಂಡುತ್ತಿದೆ. ಬಾಲಕಿ ತೇಜಸ್ವಿನ ಮೃತಪಟ್ಟ ಸಂದರ್ಭದಲ್ಲಿ ತಂದೆ-ತಾಯಿ ಮತ್ತು ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು.
ಕಾರಣಗಳೇನು?
ಹದಿಹರೆಯದವರಿಗೆ ಹೃದಯಾಘಾತ ಸಂಭವಿಸಲು ರಕ್ತದೊತ್ತಡ, ಮಧುಮೇಹ, ರಕ್ತದಲ್ಲಿ ಕೊಲೆಸ್ಟ್ರಾಲ್, ದೇಹದ ತೂಕ ಪ್ರಮುಖ ಕಾರಣವಾಗುತ್ತಿವೆ. ರೋಗಿಯ ಕೌಟುಂಬಿಕ ಹಿನ್ನೆಲೆಯೂ ಮುಖ್ಯ ಅಂಶವಾಗುತ್ತಿದೆ. 50 ವರ್ಷದೊಳಗಿನವರಿಗೆ ಹೃದಯಾಘಾತವಾಗಿದ್ದರೆ ಅವರ ಕುಟುಂಬದಲ್ಲಿ ಮತ್ತೊಬ್ಬರಿಗೆ ಹೃದಯಾಘಾತವಾದಾಗ ಇದನ್ನು ್ಯಾಮಿಲಿ ಹಿಸ್ಟರಿಗೆ ಸೇರಿಸಲಾಗುತ್ತದೆ. ಇಂದಿನ ಯುವಪೀಳಿಗೆ ಮಧ್ಯಪಾನ, ಧೂಮಪಾನದಂತಹ ಚಟಗಳಿಗೆ ಸಿಲುಕಿದೆ. ಧೂಪಮಾನ ಶೇ.60ರಷ್ಟು ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಆಹಾರದಲ್ಲಿ ಸಕ್ಕರೆ, ಸಿಹಿತಿಂಡಿ, ಉಪ್ಪು, ಾಸ್ಟ್‌ುಡ್, ಕೊಬ್ಬಿನಾಂಶ ಜಾಸ್ತಿ ಇದ್ದರೆ ಅಪಾಯಕಾರಿ. ತೂಕ ಕಡಿಮೆ ಇದ್ದರೂ ಕೊಲೆಸ್ಟ್ರಾಲ್ ಜಾಸ್ತಿ ಇರುವ ಸಾಧ್ಯತೆಗಳೂ ಇವೆ. ಒತ್ತಡದ ಜೀವನ ಹೃದಯದ ಮೇಲೆ ಬಹಳ ಪರಿಣಾಮ ಬೀರುತ್ತಿದೆ. ಒತ್ತಡವೂ ಒಂದು ರೀತಿಯ ಚಟವಾಗಿ ಪರಿಣಮಿಸುತ್ತಿದೆ. ಸಣ್ಣ-ಪುಟ್ಟ ವಿಚಾರಗಳಿಗೂ ಒತ್ತಡ ತೆಗೆದುಕೊಂಡು ಆರೋಗ್ಯ ಹಾಳು ಮಾಡಿಕೊಳ್ಳುವವರು ಹೆಚ್ಚಾಗುತ್ತಿದ್ದಾರೆ. ಜಿಮ್ ಸೇರುವ ಯುವಕರು ಮೊದಲೇ ಆರೋಗ್ಯ ತಪಾಸಣೆ ಮಾಡಿಸಿಕೊಂಡು ದೇಹದ ತೂಕಕ್ಕೆ ಸರಿಪ್ರಮಾಣದಲ್ಲಿ ಭಾರ ಎತ್ತಬೇಕು. ಅತಿಯಾದ ವ್ಯಾಯಾಮ ಮಾಡುವುದೂ ಸಹ ಆರೋಗ್ಯಕ್ಕೆ ಅಪಾಯಕಾರಿ. ದೇಹ ಹುರಿಗೊಳಿಸಲು ಸ್ಟಿರಾಯ್ಡಿ ಉಪಯೋಗಿಸುವುದರಿಂದಲೂ ಸಮಸ್ಯೆಯುಂಟಾಗುತ್ತದೆ. ಕೋವಿಡ್ ಲಸಿಕೆಯಿಂದ ಹರಿಹರೆಯದವರಲ್ಲಿ ಹೃದಯಾಘಾತ ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಸಿಎಂ ಸಿದ್ದರಾಮಯ್ಯ ಅವರಿಗೆ ಇ-ಮೇಲ್ ಮಾಡಿ ಗಮನ ಸೆಳೆದಿದ್ದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಧ್ಯಯನ ನಡೆಸಲು ಸಮಿತಿಯನ್ನು ನೇಮಕ ಮಾಡಿತು.
ಜೀವ ರಕ್ಷಕ ಪುನೀತ್ ಯೋಜನೆ: ಅಭಿಮಾನಿಗಳ ಪಾಲಿನ ದೈವ ಪುನೀತ್ ರಾಜ್‌ಕುಮಾರ್ ಅವರ ಹೆಸರಿನ ಡಾ.ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಹೃದ್ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಒಟ್ಟು 30ಕ್ಕೂ ಹೆಚ್ಚು ರೋಗಿಗಳಲ್ಲಿ 23 ರೋಗಿಗಳು ಈ ಹಿಂದಿನಿಂದಲೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಡಾ.ಪುನೀತ್‌ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ ಬಂದ ಮೇಲೆ 10ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.
30 ವರ್ಷದ ನಂತರ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕುಟುಂಬದಲ್ಲಿ ಯಾರಿಗಾದರೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಇದ್ದರೆ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು. ದೈಹಿಕ ಮತ್ತು ಮಾನಸಿಕವಾಗಿ ವಿಶ್ರಾಂತಿ ಪಡೆಯಲು ಕೆಲಸದ ಸಮಯ ನಿಗದಿ ಮಾಡಿಕೊಳ್ಳಬೇಕು. ನಿದ್ರೆ ಮಾಡುವುದು ವಿಶ್ರಾಂತಿಯ ಪ್ರಮುಖ ಭಾಗ. ನಿಯಮಿತ ಆಹಾರ, ವ್ಯಾಯಾಮ ಮಾಡಬೇಕು. ಆಹಾರದಲ್ಲಿ ಕೊಬ್ಬಿನಾಂಶ, ಅತಿಯಾದ ಉಪ್ಪು, ಾಸ್ಟ್‌ಪುಡ್‌ಅನ್ನು ನಿಯಂತ್ರಿಸಬೇಕು. ಡಾ.ಶರತ್ ಕುಮಾರ್, ಫಿಜಿಶಿಯನ್, ಸಿಮ್ಸ್, ಚಾಮರಾಜನಗರ