ಕಿರಿಯರಿಗೆ ಆದರ್ಶವಾಗಿದ್ದ ಬಾಬಾಗೌಡ

21Khanapur1
ಗಂದಿಗವಾಡ ಗ್ರಾಮದಲ್ಲಿ ಬಾಬಾಗೌಡ ಪಾಟೀಲರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗುರುಲಿಂಗಯ್ಯ ಪೂಜೇರ, ಅಶೋಕ ಯಮಕನಮರಡಿ, ಯಲ್ಲಪ್ಪ ಚನ್ನಾಪುರ, ಮಹಾಂತೇಶ ರಾಹುತ ಮತ್ತಿತರರು ಇದ್ದರು.
Published on

ಖಾನಾಪುರ: ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಶುಕ್ರವಾರ ಮಾಜಿ ಸಚಿವ, ದಿ.ಬಾಬಾಗೌಡ ಪಾಟೀಲ ಅವರ ಶ್ರದ್ಧಾಂಜಲಿ ಸಭೆ ಜರುಗಿತು. ರೈತ ಮುಖಂಡರಾದ ಅಶೋಕ ಯಮಕನಮರಡಿ, ಗುರುಲಿಂಗಯ್ಯ ಪೂಜೇರ, ಯಲ್ಲಪ್ಪ ಚನ್ನಾಪುರ, ಮಹಾಂತೇಶ ರಾಹುತ ಮತ್ತಿತರರು ಬಾಬಾಗೌಡರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಗುರುಲಿಂಗಯ್ಯ ಪೂಜೇರ ಮಾತನಾಡಿ, ಬಾಬಾಗೌಡರು ಬೆಳಗಾವಿ ಸಂಸದರಾಗಿದ್ದರೂ ಖಾನಾಪುರ ತಾಲೂಕಿನ ಬಗ್ಗೆಯೂ ಅಷ್ಟೇ ಅಭಿಮಾನ ಹೊಂದಿದ್ದರು. ಅವರು ಎಲ್ಲರಿಗೂ ಆದರ್ಶರಾಗಿದ್ದರು. ಇಂದಿಗೂ ಅವರ ಸಹಸ್ರಾರು ಅಭಿಮಾನಿಗಳು ಖಾನಾಪುರ ತಾಲೂಕಿನಲ್ಲಿ ಇದ್ದಾರೆ ಎನ್ನುವ ಮೂಲಕ ಬಾಬಾಗೌಡರು ಮತ್ತು ಖಾನಾಪುರ ತಾಲೂಕಿನ ನಡುವೆ ಇದ್ದ ಅವಿನಾಭಾವ ಸಂಬಂಧವನ್ನು ಸ್ಮರಿಸಿದರು.

ತೋಪಿನಕಟ್ಟಿ ಮಹಾಲಕ್ಷ್ಮೀ ಗ್ರುಪ್ ವತಿಯಿಂದ: ಪಟ್ಟಣದಲ್ಲಿ ತೋಪಿನಕಟ್ಟಿ ಮಹಾಲಕ್ಷ್ಮೀ ಗ್ರುಪ್ ಮತ್ತು ಲೈಲಾ ಶುಗರ್ಸ್ ವತಿಯಿಂದ ದಿ.ಬಾಬಾಗೌಡ ಪಾಟೀಲ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಹಾಲಕ್ಷ್ಮೀ ಗ್ರುಪ್ ಸಂಸ್ಥಾಪಕ ವಿಠ್ಠಲ ಹಲಗೇಕರ್ ಶ್ರದ್ಧಾಂಜಲಿ ಸಲ್ಲಿಸಿದರು.

ಪಾರಿಶ್ವಾಡ ಹನಿವೆಲ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶುಕ್ರವಾರ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಶಾಲೆಯ ಆಡಳಿತ ಮಡಳಿ ಅಧ್ಯಕ್ಷ ಸುಭಾಸ ಗುಳಶೆಟ್ಟಿ ಸೇರಿದಂತೆ ಶಾಲೆಯ ಆಡಳಿತ ಮಂಡಳಿ ನಿರ್ದೇಶಕರು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿ ಬಾಬಾಗೌಡರ ಆತ್ಮಕ್ಕೆ ಶಾಂತಿಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net