

ಕಲಬುರಗಿ: 40 ದಿನಗಳಿಂದ ಸ್ಥಗಿತಗೊಂಡಿದ್ದ ಕಿರಾಣಾ ಬಜಾರಾದಲ್ಲಿನ ವಹಿವಾಟಿಗೆ ಮಂಗಳವಾರ ಮರುಚಾಲನೆ ನೀಡಲಾಯಿತು. ಸೂಪರ್ ಮಾರ್ಕೆಟ್ನಲ್ಲಿನ ಕಿರಾಣಾ ಬಜಾರದಲ್ಲಿ ವ್ಯಾಪಾರ ವಹಿವಾಟಿಗೆ ಸಂಸದ ಡಾ. ಉಮೇಶ ಜಾಧವ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಚಾಲನೆ ನೀಡಿದರು.
ಈ ಮೊದಲು ಕಿರಾಣಾ ಬಜಾರದಲ್ಲಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟಾಗ ಜನರು ಗದ್ದಲ ಮಾಡಿದ್ದರಿಂದ ಜಿಲ್ಲಾಡಳಿತ ವ್ಯಾಪಾರ ಸ್ಥಗಿತಕ್ಕೆ ಕ್ರಮ ಕೈಗೊಂಡಿತ್ತು.
ಸಂಸದ ಡಾ.ಉಮೇಶ ಜಾಧವ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಅವರು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ನಿರಂತರ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿದ್ದರಿಂದ ವಹಿವಾಟು ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದೆ.
ನಂತರ ಮಾತನಾಡಿದ ಡಾ. ಜಾಧವ್ ಹಾಗೂ ಬಿ.ಜಿ.ಪಾಟೀಲ್ ಅವರು ವಾರದಲ್ಲಿ ಮೂರು ದಿನ ಮಾತ್ರ ಕಿರಾಣಾ ಬಜಾರದಲ್ಲಿ ಅಂಗಡಿಗಳು ಓಪನ್ ಇರಲಿವೆ. ಉಳಿದ ದಿನಗಳಲ್ಲಿ ಎಪಿಎಂಸಿಯಲ್ಲಿ ವಹಿವಾಟು ನಡೆಯಲಿದೆ. ಸಾರ್ವಜನಿಕರು ಪರಸ್ಪರ ಅಂತರ ಕಾಪಾಡಿಕೊಂಡು ಕಿರಾಣಿ ಸಾಮಗ್ರಿ ಖರೀದಿಸಬೇಕು ಎಂದು ಸಲಹೆ ನೀಡಿದರು. ಲಾಕ್ಡೌನ್ ನಿಯಮ ಮೀರದಂತೆ ಎಚ್ಚರಿಕೆ ವಹಿಸುವಂತೆ ವ್ಯಾಪಾರಿಗಳಿಗೂ ಸೂಚಿಸಿದರು. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಬಿಜೆಪಿ ಯುವ ಮುಖಂಡ ಚಂದು ಪಾಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಇತರರಿದ್ದರು.