ಕಿರದಳ್ಳಿ ತಾಂಡಾಕ್ಕೆ ತಾಪಂ ಇಒ ಭೇಟಿ

ydg07
Published on

ಕೆಂಭಾವಿ: ಕಿರದಳ್ಳಿ ತಾಂಡಾದಲ್ಲಿ ಮೂರು ತಿಂಗಳಿAದ ಕೆಟ್ಟು ಹೋದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸೋಮವಾರ ತಾಪಂ ಕಾರ್ಯನಿರ್ವಹಣಾಧಿಕಾರಿ ಬಸವರಾಜ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತು.

ಈ ಕುರಿತು ಸೆ.೨೦ರಂದು ವಿಜಯವಾಣಿ ವರದಿ ಮಾಡಿದ್ದರಿಂದ ಎಚ್ಚೆತ್ತ ತಾಲೂಕು ಆಡಳಿತ ಬಸವರಾಜ ಸಜ್ಜನ್ ನೇತೃತ್ವದ ಅಧಿಕಾರಿಗಳ ತಂಡ ತಾಂಡಾಕ್ಕೆ ಭೇಟಿ ನೀಡಿ, ಮಾತನಾಡಿದ ಅವರು, ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿರುವ ಬಗ್ಗೆ ಗ್ರಾಮಸ್ಥರ ಮತ್ತು ಪತ್ರಿಕೆಯಿಂದ ನನ್ನ ಗಮನಕ್ಕೆ ಬಂದಿದ್ದು, ಕೂಡಲೇ ಅದನ್ನು ದುರಸ್ತಿ ಮಾಡಿ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಇದಾದ ನಂತರ ತಾಂಡಾದಲ್ಲಿನ ಸಮಸ್ಯೆ ಆಲಿಸಿದರು. ಗ್ರಾಮೀಣ ನೀರು ಸರಬರಾಜ ಇಲಾಖೆಯ ಅಧಿಕಾರಿಗಳಾದ ಎಚ್.ಡಿ.ಪಾಟೀಲ್, ಸ್ಪೂರ್ತಿ, ಪಿಡಿಒ ಬಾಲಕೃಷ್ಣ, ಲಾಲು ಚವ್ಹಾಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net