ಕಿಮ್್ಸ ಸಿಬ್ಬಂದಿಗೆ ‘ಗೇಮ್ ಇಷ್ಟ

101495836-470106547
Published on

ಹುಬ್ಬಳ್ಳಿ: ನಗರದ ಕಿಮ್್ಸ ಆಸ್ಪತ್ರೆಯ ಸಿಬ್ಬಂದಿಗೆ ರೋಗಿಗಳ ಆರೈಕೆಗಿಂತ ‘ಗೇಮ್ ಆಡೋದು ಅಂದರೆ ಇಷ್ಟ. ಇತ್ತೀಚೆಗೆ ಹೊರ ಹಾಗೂ ಒಳರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ಘಟಕದ ನೋಂದಣಿ ವಿಭಾಗಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಚೀಟಿ ಮಾಡಿಕೊಡುವ ಬದಲು ಕ್ಯಾಂಡಿಕ್ರಷ್ ಗೇಮ್ ಆಡುತ್ತಿರುವುದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ಕರೊನಾ ಸೋಂಕು ಹರಡಬಾರದು ಎಂದು ಅದೆಷ್ಟೋ ಜನರು ಸರತಿ ಸಾಲಿನಲ್ಲಿ ನಿಂತು ಗಂಟೆ ಗಟ್ಟಲೆ ಕಾಯುತ್ತಾರೆ. ಆದರೆ, ಬಂದ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಬೇಗ ನೋಂದಣಿ ಚೀಟಿ ಮಾಡಿ ಕಳುಹಿಸಿ ಕೊಡಬೇಕೆಂಬ ಪರಿಜ್ಞಾನ ಇಲ್ಲ. ಕರ್ತವ್ಯ ನಿರ್ವಹಣೆಗಿಂತ ಗೇಮ್ ಆಡುವುದೆಂದರೆ ಇಲ್ಲಿನ ಸಿಬ್ಬಂದಿಗೆ ಬಲು ಇಷ್ಟ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net