ಕಿಮ್ಸ್​ನಲ್ಲಿ ಸ್ವಾಬ್ ಕಲೆಕ್ಷನ್ ಲ್ಯಾಬ್ ಸ್ಥಾಪನೆ

h8-Kims 1
Published on

ಹುಬ್ಬಳ್ಳಿ: ನಗರದ ಕಿಮ್್ಸಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಂಭಾಗದಲ್ಲಿ ಸ್ವಾಬ್ ಕಲೆಕ್ಷನ್ ಲ್ಯಾಬ್​ಅನ್ನು ಬುಧವಾರ ಸ್ಥಾಪಿಸಲಾಯಿತು.

ಡಾ. ಪ್ರಕಾಶ ಸಂಕನೂರ ಅವರು ಇದನ್ನು ಸಿದ್ಧಪಡಿಸಿದ್ದು, ಈಗಾಗಲೇ ಗದಗ ಜಿಲ್ಲೆಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ಥಾಪಿಸಲಾಗಿದೆ. ಎಂಎಲ್​ಸಿ ಎಸ್.ವಿ. ಸಂಕನೂರು, ಯಂಗ್ ಇಂಡಿಯನ್ಸ್ ಹು-ಧಾ ಶಾಖೆ ಮತ್ತು ಲೇಡಿಸ್ ಸರ್ಕಲ್ ಇಂಡಿಯಾ ಸಹಭಾಗಿತ್ವದಲ್ಲಿ ಕಿಮ್ಸ್​ನಲ್ಲಿ ಸ್ಥಾಪಿಸಲಾಯಿತು. ಇನ್ನೊಂದು ಘಟಕವನ್ನು ಧಾರವಾಡದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಲ್ಯಾಬ್​ಅನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದರು.

ಎಂಎಲ್​ಸಿಗಳಾದ ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ದೀಪಾ ಚೋಳನ್, ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಡಾ. ಅರುಣಕುಮಾರ ಸಿ., ಡಾ. ರಾಜಶೇಖರ ದ್ಯಾಬೇರಿ, ಡಾ. ಎಸ್.ವೈ. ಮುಲ್ಕಿಪಾಟೀಲ, ಡಾ. ರವೀಂದ್ರ ಗದಗ ಇತರರು ಇದ್ದರು.

ಕರೊನಾ ಸೋಂಕಿತ ವ್ಯಕ್ತಿಯ ಗಂಟಲ ದ್ರವ ಮಾದರಿ ಪಡೆಯಲು ಈ ಸ್ವಾಬ್ ಕಲೆಕ್ಷನ್ ಲ್ಯಾಬ್ ಉಪಯೋಗವಾಗಲಿದೆ. ವೈದ್ಯಕೀಯ ಸಿಬ್ಬಂದಿಗೆ ಸೋಂಕಿತರಿಂದ ಸಂರಕ್ಷಣೆ ಸಿಗಲಿದೆ. ಹುಬ್ಬಳ್ಳಿಯಲ್ಲಿ ಇದು ಪ್ರಥಮವಾಗಿದ್ದು ಇನ್ನಷ್ಟು ಅಳವಡಿಸಲಾಗುವುದು.| ಡಾ. ಶ್ರೀನಿವಾಸ ಜೋಶಿ, ಯಂಗ್ ಇಂಡಿಯನ್ಸ್ ಹು-ಧಾ ಶಾಖೆ ಚೇರ್ಮನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net