ಕಿನ್ನರಿ ಬಮ್ಮಯ್ಯ ಅದ್ದೂರಿ ರಥೋತ್ಸವ

Capture
Published on

ಹುಮನಾಬಾದ್: ಹಳ್ಳಿಖೇಡ (ಕೆ) ಗ್ರಾಮದಲ್ಲಿ ಸೋಮವಾರ ಸಂಜೆ ಶರಣ ಕಿನ್ನರಿ ಬಮ್ಮಯ್ಯ ರಥೋತ್ಸವ ಅಪಾರ ಜನಸ್ತೋಮದ ಮಧ್ಯ ಸಡಗರದಿಂದ ಜರುಗಿತು. ರಥೋತ್ಸವದಲ್ಲಿ ಶ್ರೀ ಉದಯರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ, ಶ್ರೀ ಸಿದ್ಧರಾಮ ದೇವರು, ಸದಾಲಪುರ ಶ್ರೀಗಳು ನೇತೃತ್ವ ವಹಿಸಿದ್ದರು.

ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆ ಮಹಾ ರುದ್ರಾಭಿಷೇಕ, ಪೂಜೆ, ಭಜನೆ, ಮಧ್ಯಾಹ್ನ ದೇವಸ್ಥಾನದಿಂದ ರಥದ ವರೆಗೆ ಕುಂಭ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಸಂಗೀತ ವ್ಯಾದಮೇಳಗಳೊಂದಿಗೆ ಶ್ರದ್ಧಾ, ಭಕ್ತಿಯೊಂದಿಗೆ ಭಕ್ತರ ಜೈ ಘೋಷಗಳ ಮಧ್ಯೆ ವೈಭವದ ರಥೋತ್ಸವ ಆರಂಭಗೊಂಡಿತು. ಭಕ್ತರು ಬಾಳೆಹಣ್ಣು ಹಾರಿಸಿ ಹರಕೆ ತೀರಿಸಿದರು. ಬೀದರ್, ಕಲಬುರಗಿ ಜಿಲ್ಲೆಯ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಗುಡ್ಡದೆಲ್ಲಡೆ ಭಕ್ತ ಸಮೂಹ ಕಂಡುಬಂದಿತು.

ನಾಗರ ಪಂಚಮಿಗೆ ತವರು ಮನೆಗೆ ಹೋಗುವ ರೂಢಿಯಂತೆ, ಈ ಗ್ರಾಮದ ಮತ್ತು ಸುತ್ತಮುತ್ತಲಿನ ಮಹಿಳೆಯರು ಕಡ್ಡಾಯವಾಗಿ ಈ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಮಹೋತ್ಸವದಲ್ಲಿ ಭಾಗವಹಿಸುತ್ತಾರೆ. ಅಲ್ಲದೆ ಪುರುಷರು ಸಹ ಎಲ್ಲೆ ಇದ್ದರೂ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಾಡಿಕೆ ಇಲ್ಲಿದೆ.

ಜಾತ್ರಾ ಸಮಿತಿ ಅಧ್ಯಕ್ಷ ಸುಭಾಷ ವಾರದ, ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಯ್ಯ ಚಿಕ್ಕಮಠ, ಪ್ರಮುಖರಾದ ಅಣ್ಣಾರಾವ ರಟಕಲ್, ರಾಜಕುಮಾರ ರಾಜೋಳೆ, ಸುಭಾಷ ಚಿಲಶೆಟ್ಟಿ, ಭಕ್ತರಾಜ ಚಿತ್ತಾಪುರೆ, ಸಿದ್ರಾಮ ಇಂಡಿ, ಮಲ್ಲಿಕಾಜರ್ುನ ತಟಪಟ್ಟಿ, ಇಂದ್ರ ಕರಣ ಬಿರಾದಾರ, ನಾಗಣ್ಣ ಚಿಕ್ಕಪಾಟೀಲ್, ಉದಯ ವಾರದ, ಭೀಮಶಾ ಕೋರಿ, ಶರಬಸಪ್ಪ ಪಡಶೆಟ್ಟಿ, ಮಹೇಶ ಚಿಲಶೆಟ್ಟಿ, ಸಂಗಮೇಶ ಸಿದ್ದೇಶ್ವರ, ಮೈಲಾರಿ ಬುಕ್ಕಾ, ಭೀಮಶಾ ಸ್ವಂತ, ಚಿದಾನಂದ ಚಿಕಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net