

ವಿಜಯಪುರ: ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಶ್ರೀ ವೀರರಾಣಿ ಕಿತ್ತೂರು ಚೆನ್ನಮ್ಮ ಸಾಮಾಜಿಕ ಸೇವಾ ಸಂಘ ಉದ್ಘಾಟನೆ ಮಾಡಲಾಯಿತು. ಈ ಶುಭ ಸಮಾರಂಭದ ದಿವ್ಯ ಸಾನಿಧ್ಯವನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರುಗಳಾದ ಪ. ಪೂ. ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಸಿ ಎಸ್ ನಾಡಗೌಡ, ಶಂಕರರಾವ್ ದೇಶಮುಖ, ಗುರುಪ್ರಸಾದ ದೇಶಮುಖ, ಡಾ. ಸಿ ಎಸ್ ಸೋಲಾಪುರ(ಕಗ್ಗೊಡ ), ಶ್ರೀ ಅಮರೇಶ ಕುಂಗೂಳಿ, ಶರಣಪ್ಪ ಗಂಗನಗೌಡರ, ಶಂಕರಗೌಡ ಹಿರೆಗೌಡರ, ಎ. ಜಿ. ಗಂಗನಗೌಡ್ರ, M B ಅಂಗಡಿ ಮತ್ತಿತರರು ಇದ್ದರು.