ಕಿತ್ತೂರು ಚನ್ನಮ್ಮ ನಾಟಕದ ಮೆಗಾ ಪ್ರದರ್ಶನ 24, 25ರಂದು

2222222222
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ರಂಗಾಯಣದಿAದ ವೀರರಾಣಿ ಕಿತ್ತೂರು ಚೆನ್ನಮ್ಮ ಜೀವನ ಆಧಾರಿತ ಮೆಗಾನಾಟಕವನ್ನು ಪ್ರಥಮ ಬಾರಿಗೆ ಪ್ರದರ್ಶನಕ್ಕೆ ಸಿದ್ಧಗೊಳಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಹೇಳಿದರು.
ನಗರದ ಜಿಲ್ಲಾಽಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕೆಸಿಡಿ ಆವರಣದಲ್ಲಿ ಡಿ. ೨೪ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಟಕದ ಪ್ರಥಮ ಪ್ರದರ್ಶನಕ್ಕೆ ಚಾಲನೆ ನೀಡುವರು. ವಿವಿಧ ಸಚಿವರು, ಶಾಸಕರು, ಸ್ವಾಮೀಜಿಗಳು ಭಾಗವಹಿಸುವರು. ಸ್ವಾತಂತ್ರ‍್ಯ ಸಮರದ ಬೆಳ್ಳಿ ಚುಕ್ಕಿ ವೀರರಾಣಿ ಕಿತ್ತೂರು ಚೆನ್ನಮ್ಮ ಜೀವನಾಧಾರಿತ ನಾಟಕ ಪ್ರಸ್ತುತಪಡಿಸುವಲ್ಲಿ ಅನೇಕ ಸಂಶೋಧಕರು, ವಿದ್ವಾಂಸರ ಸಲಹೆ, ಮಾರ್ಗದರ್ಶನ ಪಡೆಯಲಾಗಿದೆ. ಅವರ ವಿಮರ್ಶೆಯಿಂದ ಬಂದ ಅಂಶಗಳನ್ನು ನಾಟಕದಲ್ಲಿ ಅಳವಡಿಸಲಾಗಿದೆ. ಬೃಹತ್ ವೇದಿಕೆಯಲ್ಲಿ ಜೀವಂತ ಆನೆ, ಕುದುರೆ, ನೂರಾರು ಕಲಾವಿದರನ್ನು ಸಂಯೋಜಿಸಿ, ನಾಟಕವನ್ನು ವಿಭಿನ್ನವಾಗಿ ಪ್ರದರ್ಶನ ಮಾಡಲಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಽಕಾರಿ ಶಿವಾನಂದ ಭಜಂತ್ರಿ ಮಾತನಾಡಿ, ವೀರರಾಣಿ ಕಿತ್ತೂರು ಚೆನ್ನಮ್ಮ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಹೊರಾಡುದ ರೀತಿ, ಸ್ವಾಭಿಮಾನ, ದೇಶಾಭಿಮಾನ ಎಲ್ಲರಿಗೂ ಅನುಕರಣೀಯ. ಅವರ ಜೀವನಾಧಾರಿತ ಘಟನೆಗಳು ಮೆಗಾನಾಟಕ ಸ್ವರೂಪದಲ್ಲಿ ಪ್ರದರ್ಶನವಾಗುತ್ತಿರುವುದು ಸಂತೋಷದ ಸಂಗತಿ. ರಂಗಾಯಣದಿAದ ಮೊದಲ ಬಾರಿಗೆ ಇಂಥ ದೊಡ್ಡ ನಾಟಕವನ್ನು ಸಿದ್ಧಪಡಿಸಿ ಪ್ರದರ್ಶನ ಮಾಡಲಾಗುತ್ತಿದೆ. ಸರ್ಕಾರಿ ಇಲಾಖೆಗಳ ಅಽಕಾರಿಗಳು ಮತ್ತು ಕಲಾ ಆಸಕ್ತರು, ಸಾರ್ವಜನಿಕರು ರಂಗಾಯಣದ ಪ್ರಯೋಗಗಳನ್ನು ಪ್ರೊತ್ಸಾಹಿಸಬೇಕು ಎಂದರು.
ರAಗಾಯಣ ಆಡಳಿತಾಽಕಾರಿ ಶಶಿಕಲಾ ಹುಡೇದ, ವಿವಿಧ ಇಲಾಖೆಗಳ ಅಽಕಾರಿಗಳು, ಸಂಘ- ಸಂಸ್ಥೆಗಳ ಪ್ರತಿನಿಽಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net