ಕಿತ್ತೂರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ

web3
ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಪತ್ನಿ ರೋಹಿಣಿ ಬಾಬಾಸಾಹೇಬ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಸುಹಾಸ ಕುಲ್ಲೋಳ್ಳಿ, ತಮ್ಮಣ್ಣ ಪಾಟೀಲ, ಚನ್ನಗೌಡ ಪಾಟೀಲ, ರವಿ ಪಾರಿಶ್ವಾಡ, ಗಣಪತಿ ನೇಗಿನಹಾಳ ಇತರರಿದ್ದರು.
Published on

ಎಂ.ಕೆ.ಹುಬ್ಬಳ್ಳಿ: ಚಿಕ್ಕಬಾಗೇವಾಡಿ ಗ್ರಾಮದೊಂದಿಗೆ ನನ್ನ ಒಡನಾಟ 2 ದಶಕಗಳಿಗಿಂತಲೂ ಹೆಚ್ಚಿನದ್ದು. ನನ್ನ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಿದ ಯುವಪಡೆ, ಗುರು-ಹಿರಿಯರ, ಗ್ರಾಮಸ್ಥರ ನಂಬಿಕೆಗೆ ಧಕ್ಕೆಯಾಗದಂತೆ ಸೇವೆ ಸಲ್ಲಿಸುವೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಸಮೀಪದ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಅಭಿಮಾನಿ ಬಳಗ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ಗ್ರಾಮಸ್ಥರ ನಂಬಿಕೆ, ಪ್ರೀತಿಗೆ ನಾನು ಸದಾ ಚಿರಋಣಿಯಾಗಿದ್ದೇನೆ. ಊರಿನ ಶಾಲೆಗಳ ಹಾಗೂ ಸಮಗ್ರ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸುವೆ ಎಂದರು.

ಕೆಪಿಸಿಸಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ ಮಾತನಾಡಿ, ಶಾಸಕರ ಮೇಲೆ ಅಭಿಮಾನಿಗಳು ಇಟ್ಟಿರುವ ಪ್ರೀತಿ, ಅಭಿಮಾನ ಖುಷಿ ತರಿಸಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಚನ್ನವ್ವ ತುರಮರಿ, ಸುಹಾಸ ಕುಲ್ಲೋಳ್ಳಿ, ಎಸ್‌ಡಿಎಂಸಿ ಅಧ್ಯಕ್ಷ ತಮ್ಮಣ್ಣ ಪಾಟೀಲ, ಚನ್ನಗೌಡ ಪಾಟೀಲ, ರವಿ ಪಾರಿಶ್ವಾಡ, ಗಣಪತಿ ನೇಗಿನಹಾಳ, ಬಸ್ಸು ಹಣಿಕೇರಿ, ಬಸಣ್ಣ ಅಂಗಡಿ, ಈರಣಗೌಡ ಪಾಟೀಲ, ಸುಧೀರ ಪಾಟೀಲ, ಗ್ರಾಪಂ ಸದಸ್ಯರಾದ ಶಿವಾನಂದ ಪೂಜೇರಿ, ಚಂದ್ರಗೌಡ ಪಾಟೀಲ, ಅಂಬರೀಶ ಸೊಗಲನ್ನವರ, ಧರೀಗೌಡ ಪಾಟೀಲ, ಶಂಕರಗೌಡ ಪಾಟೀಲ, ಬಸವರಾಜ ಸೊಗಲದ, ನಾಗನಗೌಡ ಹಿತ್ತಲಕಡೆ, ಮಹಾವೀರ ಮೂಲಿಮನಿ, ಅರ್ಜುನ ಪಡೆನ್ನವರ, ಶ್ರೀಧರ ಮೇಟಿ, ಸುಭಾಷ ಪಡೆನ್ನವರ, ಪಿಡಿಒ ಎಸ್.ಜಿ.ಪೂಜೇರಿ, ಶಣ್ಮುಖ ಗಣಾಚಾರಿ, ಮಲ್ಲನಗೌಡ ಕೋರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net