ಕಿತ್ತೂರು ಉತ್ಸವ ಸಿದ್ಧತೆ ಪರಿಶೀಲನೆ

16Kittur1
ಕಿತ್ತೂರು ಉತ್ಸವದ ಸಿದ್ಧತೆ ಕುರಿತು ಶಾಸಕ ಮಹಾಂತೇಶ ದೊಡಗೌಡರ ಅಕಾರಿಗಳಿಂದ ಮಾಹಿತಿ ಪಡೆದರು. ಉಳವಪ್ಪ ಉಳ್ಳೆಗಡ್ಡಿ, ಸಂದೀಪ ದೇಶಪಾಂಡೆ, ಸರಸ್ವತಿ ಹೈಬತ್ತಿ, ಬಸವರಾಜ ಪರವಣ್ಣವರ ಇದ್ದರು.
Published on

ಚನ್ನಮ್ಮನ ಕಿತ್ತೂರು: ವೀರರಾಣಿ ಚನ್ನಮ್ಮ ವಿಜಯೋತ್ಸವದ ದಿನದಂದು ತಾಲೂಕು ಆಡಳಿತ ಸೌಧ ಸೇರಿ ವಿವಿಧ ಇಲಾಖೆಯ ಕಟ್ಟಡಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

ರಾಜ್ಯಮಟ್ಟದಲ್ಲಿ ಆಚರಿಸಲಾಗುತ್ತಿರುವ ಕಿತ್ತೂರು ಉತ್ಸವದ ಪೂರ್ವ ತಯಾರಿಯನ್ನು ಭಾನುವಾರ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ಸವ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಆರ್. ಅಶೋಕ, ಮುರುಗೇಶ ನಿರಾಣಿ, ಶಂಕರ ಪಾಟೀಲ ಮುನೇನಕೊಪ್ಪ, ಹಾಲಪ್ಪ ಆಚಾರ್ಯ, ಬಿ.ಸಿ. ಪಾಟೀಲ ಸೇರಿ ಇತರ ಸಚಿವರು, ಸಂಸದರು ಮತ್ತು ಶಾಸಕರು ಆಗಮಿಸಲಿದ್ದಾರೆ ಎಂದರು.

ಕಿತ್ತೂರು ಉತ್ಸವದ ಮನರಂಜನೆ ಆಕರ್ಷಣೆಯ ಕೇಂದ್ರವಾಗಿ ಗಾಯಕ ರಘು ದೀಕ್ಷಿತ ಸೇರಿ ಹಲವು ಕಲಾವಿದರನ್ನು ಉತ್ಸವಕ್ಕೆ ಕರೆತರುವ ಕಾರ್ಯಗಳು ನಡೆದಿವೆ. ಅಲ್ಲಲ್ಲಿ ಎಲ್‌ಇಡಿ ಪರದೆ ಅಳವಡಿಸಲು ಸೂಚಿಸಲಾಗಿದೆ. ಮೆರವಣಿಗೆಗೆ ಎಲ್ಲ ಜಿಲ್ಲೆಗಳಿಂದ ರೂಪಕಗಳು ಆಗಮಿಸಲಿವೆ. ಆನೆಯ ಮೇಲೆ ಚನ್ನಮ್ಮಾಜಿಯ ಭಾವಚಿತ್ರ ಪ್ರದರ್ಶನ,
ಕುದುರೆ, ಪೊಲೀಸ್ ಪಥ ಸಂಚಲನ, ಬೈಕ್ ರ‌್ಯಾಲಿ, ಮೂರು ದಿನ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು. ಕೋಟೆ ಆವರಣದಲ್ಲಿ ಪೆಂಡಾಲ್ ಸಿದ್ಧತಾ ಕಾರ್ಯ ಮತ್ತು ವಿವಿಧ ಕ್ರೀಡಾಕೂಟಗಳು ನಡೆಯುವ ಸ್ಥಳಗಳನ್ನು
ಪರಿಶೀಲಿಸಿದರು. ಎಲ್ಲ ಇಲಾಖೆ ಅಕಾರಿಗಳು, ಅಭಿವೃದ್ಧಿ ಪ್ರಾಕಾರದ ಸದಸ್ಯ ಉಳವಪ್ಪ ಉಳ್ಳೆಗಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಅಧ್ಯಕ್ಷ ಬಸವರಾಜ ಪರವಣ್ಣವರ, ಬಸನಗೌಡ ಸಿದ್ರಾಮನಿ, ಸರಸ್ವತಿ
ಹೈಬತ್ತಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net